ಹೊಸದಿಲ್ಲಿ: 2024ರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಗೆ ಅರ್ಹತೆ ಪಡೆಯುವ ಮೂಲಕ ಉಗಾಂಡ ತಂಡವು ಇತಿಹಾಸ ನಿರ್ಮಿಸಿದೆ. ಆ ಮೂಲಕ ನಮೀಬಿಯಾದೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದ ಎರಡನೇ ಆಫ್ರಿಕಾ ತಂಡವಾಗಿ ಉಗಾಂಡ ಹೊರಹೊಮ್ಮಿದೆ. ಆಫ್ರಿಕಾ ಪ್ರಾಂತ್ಯದ ಕೊನೆಯ ಸುತ್ತಿನ ಅರ್ಹತಾ
ಪಂದ್ಯಗಳಲ್ಲಿ ರುವಾಂಡ ತಂಡವನ್ನು ಪರಾಭವಗೊಳಿಸಿ ಅರ್ಹತೆ ಪಡೆದಿದೆ. ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯುವಲ್ಲಿ ಝಿಂಬಾಬ್ವೆ ವಿಫಲವಾಗಿದೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ಒಟ್ಟು 20 ತಂಡಗಳು ಸೆಣಸಲಿದೆ. ಟಿ-20 ಕ್ರಿಕೆಟ್ ವಿಶ್ವಕಪ್ಗೆ ಓಮನ್, ನೇಪಾಳ, ಪಪುವ ನ್ಯೂಗಿನಿ, ಕೆನಡಾ, ನಮೀಬಿಯಾ, ಉಗಾಂಡಾ ಅರ್ಹತೆ ಪಡೆದಿದೆ. ಅತಿಥಿ ದೇಶ ಎಂಬ ಕಾರಣಕ್ಕೆ ಅಮೆರಿಕಾ ಕೂಡಾ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.
ಟಿ20 ಆಡಲಿರುವ ತಂಡಗಳು:
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಯುಎಸ್ಎ, ಓಮನ್, ನೇಪಾಳ, ಪಪುವ ನ್ಯೂಗಿನಿ, ಕೆನಡಾ, ನಮೀಬಿಯಾ, ಉಗಾಂಡಾ, ಐರ್ಲೆಂಡ್ ಮತ್ತು ಸ್ಕೋಟ್ಲೆಂಡ್.