ನವದೆಹಲಿ:ಟಿ20 ವಿಶ್ವಕಪ್ ಗೆದ್ದು ದಾಖಲೆ ನಿರ್ಮಿಸಿದ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಮೊತ್ತದ ಬಹುಮಾನ ಘೋಷಣೆ ಮಾಡಿದೆ. ಬಿಸಿಸಿಐ ಭಾರತ ಕ್ರಿಕೆಟ್ ತಂಡಕ್ಕೆ 131 ಕೋಟಿ ಬಹುಮಾನವನ್ನು ಘೋಷಿಸಿದೆ. ಈ ಮೊತ್ತಕ್ಕೆ
15 ಆಟಗಾರರು, ತರಬೇತಿ ಸಿಬ್ಬಂದಿ, ಇತರ ಸಹಾಯಕ ಸಿಬ್ಬಂದಿಯೂ ಪಾಲುದಾರರಾಗಿರುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.2024ರಲ್ಲಿ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾಗೆ 125 ಕೋಟಿ ನೀಡಲಾಗಿತ್ತು. ಈ ಬಾರಿ 6 ಕೋಟಿ ಹೆಚ್ಚಳ ಮೊತ್ತ ನೀಡಲಾಗಿದೆ. ಆಟಗಾರರಿಗೆ ಬಹುಮಾನದ ಹೆಚ್ಚಿನ ಪಾಲು ಸಿಗುವುದು ಖಚಿತ. ಆದರೆ ಸಹಾಯಕ ಸಿಬ್ಬಂದಿಗೆ ಕ್ರಮವಾಗಿ ನಿರ್ಧಾರವಾಗಲಿದೆ.









