ಟ್ರಿನಿಡಾಡ್: ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಗ್ರೂಪ್ ಹಂತದಲ್ಲೆ ಎರಡು ತಂಡಗಳು ಅಧಿಕೃತವಾಗಿ ಹೊರಬಿದ್ದಿದೆ. 2021ರ ಫೈನಲಿಸ್ಟ್ ನ್ಯೂಜಿಲ್ಯಾಂಡ್ ಮತ್ತು 2014ರ ಚಾಂಪಿಯನ್ ಶ್ರೀಲಂಕಾ ಈ ಬಾರಿಯ ಕೂಟದಿಂದ ಅಧಿಕೃತವಾಗಿ ಹೊರಬಿದ್ದಿದೆ.ಶುಕ್ರವಾರ ನಡೆದ ಪಂದ್ಯದಲ್ಲಿ
ಅಫ್ಘಾನಿಸ್ತಾನ ತಂಡವು ಗೆಲುವು ಸಾಧಿಸುವ ಮೂಲಕ ನ್ಯೂಜಿಲ್ಯಾಂಡ್ ಹೊರ ಬೀಳುವುದು ಖಚಿತವಾಗಿದೆ. ಸಿ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ
ಕಿವೀಸ್ ತಂಡವು ಈವರೆಗೆ ಎರಡು ಪಂದ್ಯ ಮಾತ್ರ ಆಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಇನ್ನು ಉಗಾಂಡ ಮತ್ತು ಪಪುವಾ ನ್ಯೂಗಿನಿ ವಿರುದ್ದ ಆಡಲಿದ್ದು ಅದು ಲೆಕ್ಕಭರ್ತಿಯ ಆಟವಾಗಲಿದೆ. ಮತ್ತೊಂದೆಡೆ ಗುರುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನೆದರ್ಲ್ಯಾಂಡ್ ವಿರುದ್ದ ಗೆದ್ದ ಕಾರಣದಿಂದ ಶ್ರೀಲಂಕಾ ತಂಡದ ಅಭಿಯಾನ ಅಂತ್ಯವಾಗಿದೆ. ಲಂಕಾ ತಂಡವು ಮೂರು ಪಂದ್ಯವಾಡಿದ್ದು, ಎರಡರಲ್ಲಿ ಸೋಲು ಕಂಡಿದೆ. ನೇಪಾಳ ವಿರುದ್ದದ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ.