ಹಾಂಗ್ಝೌ:ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಪಂದ್ಯದಲ್ಲು ನೇಪಾಳ ಕ್ರಿಕೆಟ್ ತಂಡ ಹಲವು ವಿಶ್ವ ದಾಖಲೆ ಸೃಷ್ಟಿಸಿದೆ. ಬುಧವಾರ ಮಂಗೋಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 20 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ದಾಖಲೆಯ 314 ರನ್ ಕಲೆಹಾಕಿದೆ. ಈ ಮೂಲಕ ಟಿ20ಯಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿದ ವಿಶ್ವ ದಾಖಲೆಯನ್ನು ಈ
ತಂಡ ನಿರ್ಮಿಸಿದೆ. ಮಂಗೋಲಿಯಾ 13 ಓವರ್ಗಳಲ್ಲಿ 41ರನ್ಗೆ ಆಲೌಟ್ ಆಯಿತು. ಈ ಮೂಲಕ 273 ರನ್ಗಳಿಗೆ ಗೆದ್ದ ನೇಪಾಳ ಟಿ20ಯಲ್ಲಿ ಅತೀ ದೊಡ್ಡ ಗೆಲುವಿನ ದಾಖಲೆ ಬರೆಯಿತು. ನೇಪಾಳದ ಬ್ಯಾಟ್ಸ್ಮನ್ ಕುಶಾಲ್ ಮಲ್ಲ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಶ್ವದಾಖಲೆಯನ್ನೂ ಸಹ ಮುರಿದಿದ್ದಾರೆ. ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ಶತಕ ಪೂರೈಸಿದ ಕುಶಾಲ್ ಮಲ್ಲ ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ.
ನೇಪಾಳ ತಂಡದ ಈ ಯುವ ಬ್ಯಾಟರ್ ಕುಶಾಲ್ ಮಲ್ಲ 50 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 137 ರನ್ ಸಿಡಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. ರೋಹಿತ ಹಾಗೂ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅವರ ಹಿಂದೆ ಬಂದ ದೀಪೇಂದ್ರ ಸಿಂಗ್ ಬಂದ ಕೂಡಲೇ ಬಿರುಗಾಳಿ ಎಬ್ಬಿಸಿ, ಒಂಬತ್ತು ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದು ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಅತಿವೇಗದ ಅರ್ಧಶತಕ ಎಂಬ ದಾಖಲೆಯನ್ನೂ ಬರೆಯಿತು. ಅಂತಿಮವಾಗಿ ದೀಪೇಂದ್ರ ಅವರು 10 ಎಸೆತಗಳಲ್ಲಿ ಎಂಟು ಸಿಕ್ಸರ್ಗಳ ಸಹಾಯದಿಂದ ಅಜೇಯ 52 ರನ್ ಕಲೆಹಾಕಿದರು.ಭಾರತದ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಭಾರಿಸಿದ್ದ ದಾಖಲೆಯನ್ನು ದೀಪೇಂದ್ರ ಮುರಿದರು.ನೇಪಾಳದ ನಾಯಕ ರೋಹಿತ್ ಪೌಡೆಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಆರು ಸಿಕ್ಸರ್ಗಳ ಸಹಾಯದಿಂದ 61 ರನ್ ಚಚ್ಚಿದರು. ನಾಯಕ ರೋಹಿತ್ ಪೌಡೆಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಆರು ಸಿಕ್ಸರ್ಗಳ ಸಹಾಯದಿಂದ 61 ರನ್ ಚಚ್ಚಿದರು.