ಲಂನ್: ಟಿ20 ಕ್ರಿಕೆಟ್ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯದಲ್ಲಿ ನೂತನ ದಾಖಲೆ ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ, ಇಂಗ್ಲೆಂಡ್ನ ಬಿರುಗಾಳಿಯ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 304 ರನ್ಗಳನ್ನು ಬಾರಿಸಿದರು. ಇಂಗ್ಲೆಂಡ್ನ ಆರಂಭಿಕ ಜೋಡಿ
ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಒಟ್ಟಾಗಿ ಆಫ್ರಿಕನ್ ಬೌಲರ್ಗಳ ಬೆವರಿಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ 300 ರನ್ಗಳ ಗಡಿ ದಾಟಿದ್ದು, ಅವರು ಭಾರತೀಯ ತಂಡ ಗಳಿಸಿದ್ದ 297 ರನ್ಗಳ ದಾಖಲೆಯನ್ನು ಸಹ ಮುರಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 304 ರನ್ ಸಿಡಿಸಿತು. ಪಿಲ್ ಸಾಲ್ಟ್ ಕೇವಲ 60 ಎಸೆತಗಳಲ್ಲಿ ಅಜೇಯ 141 ರನ್ ಚಚ್ಚಿದರು (15 ಫೋರ್, 8 ಸಿಕ್ಸರ್). ಜೋಸ್ ಬಟ್ಲರ್ 30 ಎಸೆತಗಳಲ್ಲಿ 83 ರನ್ ಬಾರಿಸಿದರು (8 ಫೋರ್, 7 ಸಿಕ್ಸರ್). ಹ್ಯಾರಿ ಬ್ರೂಕ್ 21 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ದ. ಆಫ್ರಿಕಾ ತಂಡ 16.1 ಓವರ್ಗಳಲ್ಲಿ 158 ರನ್ಗಳಿಗೆ ಆಲೌಟ್ ಆಯಿತು.












