ಸುಳ್ಯ:ಗಾಂಧಿಜಯಂತಿ ಪ್ರಯುಕ್ತ ಅ.1 ಮತ್ತು 2 ರಂದು ಎರಡು ದಿನಗಳ ಕಾಲ ಸುಳ್ಯದಲ್ಲಿ ಬೃಹತ್ ಸ್ವಚ್ಚತಾ ಆಂದೋಲನ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ನಡೆಸುವ ಕುರಿತು ಸುಳ್ಯ ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎಂ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಸೆ. 29 ರಂದು ನಡೆಯಿತು. ಅ.1ರಂದು ದೇಶದಾದ್ಯಂತ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ
ಸುಳ್ಯ ನಗರದಲ್ಲಿಯೂ ಸ್ವಚ್ಛತಾ ಆಂದೋಲನ ನಡೆಯಲಿದೆ.
ಕೈಗಾರಿಕಾ ಪ್ರದೇಶ, ಪಾರ್ಕ್, ಕೆಎಸ್ಆರ್ಟಿಸಿ ಡಿಪ್ಪೊ ಸೇರಿ 3 ಕಡೆಗಳಲ್ಲಿ ಅ.ಒಂದರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.ಅ.2 ರಂದು ನಗರದ ಎಲ್ಲಾ ಕಚೇರಿಗಳಲ್ಲಿ, ವಿದ್ಯಾ ಸಂಸ್ಥೆಗಳ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ, ವ್ಯಪಾರ ವ್ಯವಹಾರ ಕ್ಷೇತ್ರ, ಸಂಘ ಸಂಸ್ಥೆಗಳ ಸುತ್ತಲೂ ಸ್ವಚ್ಛತಾ ಕಾರ್ಯಕ್ರಮ ನಡೆಸಬೇಕು.9.30ರಿಂದ 10 ಗಂಟೆಯ ತನಕ ಅರ್ಧ ಗಂಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಲಾಗುವುದು.ಬಳಿಕ ಗಾಂಧಿಜಯಂತಿ ಕಾರ್ಯಕ್ರಮ ನಡೆಯಲಿದೆ. ನಗರ ಪಂಚಾಯತ್, ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಭಾಗವಹಿಸಲಿದ್ಸಾರೆ. ಸ್ವಚ್ಛತೆಯ ಸಂದರ್ಭದಲ್ಲಿ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿಡಬೇಕು.ನಗರ ಪಂಚಾಯತ್ ವಾಹನ ಬಂದು ಕಸ ಸಂಗ್ರಹ ಮಾಡಲಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್ ಆರೋಗ್ಯ ಮಾಹಿತಿ ನೀಡಿದರು.
ನ.ಪಂ.ಆಡಳಿತಾಧಿಕಾರಿ ತಹಶೀಲ್ದಾರ್ ಎಂ.ಮಂಜುನಾಥ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಹೆಚ್.ಎಂ, ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ಭಟ್ ಕೊಡೆಂಕೇರಿ, ಬುದ್ಧ ನಾಯ್ಕ್, ಡೇವಿಡ್ ಧೀರಾ ಕ್ರಾಸ್ತಾ, ಪ್ರವಿತಾ ಪ್ರಶಾಂತ್, ಶಶಿಕಲಾ ನೀರಬಿದಿರೆ, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ, ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಪ್ರಮುಖರಾದ ವಿನೋದ್ ಲಸ್ರಾದೋ, ಶ್ರೀದೇವಿ ನಾಗರಾಜ ಭಟ್, ಲತಾ ಕುದ್ಪಾಜೆ ಜನಾರ್ಧನ ನಾಯ್ಕ್, ಮೋನಪ್ಪ ಗೌಡ, ಜನಾರ್ಧನ ದೋಳ ಮತ್ತಿತರರು ಉಪಸ್ಥಿತರಿದ್ದರು.