ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಯೋಜನೆಯ ಕೇಂದ್ರ ಒಕ್ಕೂಟಗಳ
ತಾಲೂಕು ಅಧ್ಯಕ್ಷ ಸುರೇಶ್ ಕಣೆಮರಡ್ಕ ಉದ್ಘಾಟಿಸಿದರು.
ರುಡ್ಸೆಟ್ ಸಂಸ್ಥೆಯ ಹಿರಿಯ ಉಪಾನ್ಯಾಸಕರಾದ ಕೆ.ಕರುಣಾಕರ ಜೈನ್ ಅವರು ರುಡ್ ಸೆಟ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ ಸ್ವ ಉದ್ಯೋಗದ ಅವಶ್ಯಕತೆ ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಜ್ಞಾನವಿಕಾಸ ಸಮಿತಿಯ ಹಿರಿಯ ಸದಸ್ಯೆ ರುಕ್ಮಿಣಿಯವರು ವಹಿಸಿದ್ದರು. ವೇಧಿಕೆಯಲ್ಲಿ ಶಾಲಾ ಮುಖ್ಯೋಪಾದ್ಯಾಯಿನಿ ಮಂಜುಳಾ ಅತ್ಯಾಡಿ, ಜ್ಞಾನವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕರಾದ ಲಕ್ಷ್ಮಿ ಬಾರಾಲಿ ಉಪಸ್ಥಿತರಿದ್ದರು.













