ಸುಳ್ಯ: ಅಭಿವೃದ್ಧಿಯ ದೃಷ್ಠಿಯಲ್ಲಿ ನೋಡುವಾಗ ಸುಳ್ಯ ನಗರ ಹಾಗು ಗ್ರಾಮೀಣ ಭಾಗದಲ್ಲಿ ಅಜ ಗಜಾಂತರ ವ್ಯತ್ಯಾಸ ಇದೆ. ಆ ಹಿನ್ನಲೆಯಲ್ಲಿ ಸುಳ್ಯ ನಗರ ಹಾಗು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ, ಜನಪರ ಕಾಳಜಿಯುಳ್ಳ ಸುಮನಾ ಬೆಳ್ಳಾರ್ಕರ್ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಸುಮನಾ ಬೆಳ್ಳಾರ್ಕರ್ ಅವರ ಗೆಳೆಯರ ಬಳಗ ಮನವಿ ಮಾಡಿ ಕೊಂಡಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ ತುಂಕೂರು’ ಸುಮನಾ ಬೆಳ್ಳಾರ್ಕರ್ ಉತ್ತಮ ಪಕ್ಷವನ್ನೇ ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಕಳೆದ 15-20 ದಿನಗಳಿಂದ ಸುಳ್ಯ ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದೇವೆ. ನಗರ ಅಭಿವೃದ್ಧಿ ಆಗಿದ್ದರೂ ಗ್ರಾಮೀಣ ಭಾಗದ ಜನರ ಬದುಕು ಈಗಲೂ ದುಸ್ತರವಾಗಿದೆ. ರಸ್ತೆ, ನೀರು, ವಿದ್ತುತ್, ಸಾರಿಗೆ, ಸಂಪರ್ಕ, ವಸತಿ ಇಲ್ಲದೆ ಜನರು ಬವಣೆ ಅನುಭವಿಸುತ್ತಿದ್ದಾರೆ. ಅನೇಕ ದಶಕಗಳಿಂದ ಇಲ್ಲಿ ವಾಸವಾಗಿದ್ದರೂ, ಹಕ್ಕುಪತ್ರ ಸಿಕ್ಕಿಲ್ಲಾ. ಸುಮನಾ ಬೆಳ್ಳಾರ್ಕರ್ ಅವರು ಗೆದ್ದು ಶಾಸಕರಾದರೆ ಈ ಜನರ ಸಮಸ್ಯೆಗಳಿಗೆ ಬೆಳಕಾಗುವ ನಿರೀಕ್ಷೆ ಇದೆ. ಕಳೆದ 30 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸ ಮುಂದಿನ ಐದು ವರ್ಷಗಳಲ್ಲಿ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಸುಮನಾ ಬೆಳ್ಳಾರ್ಕರ್ ಒಳ್ಳೆಯ ವಿದ್ಯಾವಂತೆ ಹಾಗು ಜನಪರ ಕಾಳಜಿ ಇರುವ ಅಭ್ಯರ್ಥಿಯಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಜನಪರ ಆಡಳಿತಕ್ಕಾಗಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಸುಮನಾ ಬೆಳ್ಳಾರ್ಕರ್ ಅವರನ್ನು ಗೆಲ್ಲಿಅಬೇಕು. ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ಲೋಹಿತ್ ಮದ್ದೂರು, ವಿಜಯ ಭಗವಾನ್ ತರೀಕೆರೆ, ವೇದರಾಜ ರಾಮನಗರ ಉಪಸ್ಥಿತರಿದ್ದರು.