ಸುಳ್ಯ:ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ಪೂರ್ತಿಯಾಗಿರುವ ಹಿನ್ನಲೆಯಲ್ಲಿ ‘ಸುಳ್ಯಕ್ಕೆ 60 ವರ್ಷ’ ಸಂಭ್ರಮಾಚರಣೆ ಜನವರಿ 21ರಂದು ನಡೆಸಲು ನಿರ್ಧರಿಸಲಾಗಿದೆ.ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಸುಳ್ಯ ತಾಲೂಕು ಷಷ್ಟ್ಯಬ್ಧ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ತಾಲೂಕಿಗೆ 60 ವರ್ಷ ತುಂಬಿರುವ ಹಿನ್ನಲೆಯಲ್ಲಿ
ಸುಳ್ಯದ ಸಮಗ್ರ ಆಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಸುಳ್ಯದ ಅಭಿವೃದ್ಧಿಗೆ ಅನುದಾನ ನೀಡುವಂತೆ ವಿನಂತಿಸಲಾಗುವುದು. ಅಲ್ಲದೇ ಸ್ಮರಣ ಸಂಚಿಕೆಯನ್ನು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸುಳ್ಯದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ:
ಸುಳ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪುಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಸಲಹೆ ಸೂಚನೆ ನೀಡಿದರು.ಸುಳ್ಯದ 110 ಕೆವಿ ಸಬ್ ಸ್ಟೇಷನ್ ಕೂಡಲೇ ಅನುಷ್ಠಾನ ಆಗಬೇಕು, ಸುಸಜ್ಜಿತ ತಾಲೂಕು ಕ್ರೀಡಾಂಗಣ,ರಸ್ತೆ ಅಗಲೀಕರಣ, ಕೈಗಾರಿಕಾ ವಲಯ ಸ್ಥಾಪನೆಯಾಗಬೇಕು. ಪುರಭವನ ನಿರ್ಮಾಣ, ಅಡಿಕೆ ಸಮಸ್ಯೆಗಳ ಕುರಿತು ಸುಧಾರಣೆ, ಸುಳ್ಯ ನಗರಕ್ಕೆ ಸುಸಜ್ಜಿತ ಘನತ್ಯಾಜ್ಯ ಘಟಕ,
ಜಮೀನುಗಳ ಪೋಡಿ ಸಮಸ್ಯೆ ಪರಿಹಾರ ಸೇರಿದಂತೆ ಇತರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಹಕಾರಿಯಾಗುವಂತೆ ಕೆಲಸ ಆಗಿ ತಾಲೂಕು ಸಮಗ್ರ ಅಭಿವೃದ್ಧಿ ಆಗಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಷಷ್ಠ್ಯಬ್ಧ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಎನ್ ಮನ್ಮಥ, ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ,ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಉಪ ತಹಶೀಲ್ದಾರ್ ಚಂದ್ರಶೇಖರ,
ಪ್ರಮುಖರಾದ ನಿತ್ಯಾನಂದ ಮುಂಡೋಡಿ,ಸಂತೋಷ್ ಕುತ್ತಮೊಟ್ಟೆ, ಜಾಕೆ ಮಾಧವ ಗೌಡ,ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.ಸಭೆಯಲ್ಲಿ ಪ್ರಮುಖರಾದ ಪಿ.ಸಿ ಜಯರಾಮ, ಚಂದ್ರ ಕೋಲ್ಚಾರ್,ಕೆ.ಆರ್ ಗಂಗಾಧರ, ಪ್ರೊ.ಕೆ.ವಿ.ದಾಮೋದರ ಗೌಡ, ಎಂ.ವೆಂಕಪ್ಪ ಗೌಡ, ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ ,ಕೆ.ಸಿ ಸದಾನಂದ ,ದೊಡ್ಡಣ್ಣ ಬರೆಮೇಲು, ಸಂತೋಷ್ ಜಾಕೆ, ಸುಪ್ರೀತ್ ಮೋಂಟಡ್ಕ, ನಂದರಾಜ್ ಸಂಕೇಶ್, ಗ್ರಾ.ಪಂ.ಅಧ್ಯಕ್ಷರಾದ ವೀಣಾ ವಸಂತ್ ಆಲೆಟ್ಟಿ,ಗೀತಾ ಹೊಸೊಳಿಕೆ, ದೇವಕಿ ವಿಷ್ಣು ನಗರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಆರೋಗ್ಯ ಇಲಾಖೆಯ ಪ್ರಮಿಳಾ, ಸುನೀಲ್ ಕೇರ್ಪಳ ಸತ್ಯಕುಮಾರ್ ಆಡಿಂಜ, ರಾಜು ಪಂಡಿತ್, ಗೋಕುಲ್ ದಾಸ್ ಕೆ,ಎ.ಸಿ ವಸಂತ, ಭವಾನಿಶಂಕರ್ ಕಲ್ಮಡ್ಕ , ಶಶಿಧರ ಎಂ.ಜೆ, ಪದ್ಮನಾಭ ಬೀಡು, ಬಾಲಕೃಷ್ಣ ಕೀಲಾಡಿ,ಡಾ.ರಾಮ್ ಮೋಹನ್,ಪವನ್ ಪಲ್ಲತ್ತಡ್ಕ, ಮಂಜುನಾಥ್ ಮಡ್ತಿಲ, ಶಾಂತರಾಮ ಕಣಿಲೆಗುಂಡಿ, ಅನಂತ ಖಂಡಿಗೆಮೂಲೆ, ಹೇಮಂತ್ ಕಾಮತ್, ರಂಜಿತ್ ಅಡ್ತಲೆ, ನಮಿತಾ, ಶ್ವೇತಾ, ಅರಬಣ್ಣ ಪೂಜೇರಿ, ತೀರ್ಥರಾಮ ಜಾಲ್ಸೂರು, ಮತ್ತಿತರರು ಉಪಸ್ಥಿತರಿದ್ದರು.
ದಿನೇಶ್ ಮಡಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಪಿ.ಎಸ್ ಗಂಗಾಧರ ವಂದಿಸಿದರು.
ಸುಳ್ಯ ತಾಲೂಕು ಬೆಳೆದು ಬಂದ ಹಾದಿ ಹಾಗೂ ಸುಳ್ಯದ ವಿಶೇಷತೆ ಬಗ್ಗೆ ಬೆಳಕು ಚೆಲ್ಲುವ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಆಕರ್ಷಕ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಣೆ ನಡೆಯಲಿದೆ.




