ಸುಳ್ಯ:ಶಾಸಕರ ವಿಶೇಷ ಅನುದಾನದಲ್ಲಿ ಸುಳ್ಯ ನಗರದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಒಟ್ಟು 85 ಲಕ್ಷ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಸುಳ್ಯ ನಗರದ ಜಯನಗರ ರಸ್ತೆ, ಕೇರ್ಪಳ ರಸ್ತೆ, ಕಾಯರ್ತೋಡಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಜಯನಗರ ರಸ್ತೆಯ
ಅಭಿವೃದ್ಧಿಗೆ 20 ಲಕ್ಷ, ಕಾಯರ್ತೋಡಿ ರಸ್ತೆ ಅಭಿವೃದ್ಧಿಗೆ 20 ಲಕ್ಷ, ಕೇರ್ಪಳ-ಭಸ್ಮಡ್ಕ ರಸ್ತೆ ಅಭಿವೃದ್ಧಿಗೆ15 ಲಕ್ಷ, ಶಾಂತಿನಗರ ರಸ್ತೆ ಅಭಿವೃದ್ಧಿಗೆ 20 ಲಕ್ಷ, ಬಂಟರ ಭವನದ ಸಮೀಪ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ ಅನುದಾನ ಹೀಗೆ ನಗರ ವ್ಯಾಪ್ತಿಯಲ್ಲಿ ಒಟ್ಟು 85 ಲಕ್ಷ ಅನುದಾನ ಮೀಸಲಿರಿಸಲಾಗಿದೆ.ಜಯನಗರ, ಕಾಯರ್ತೋಡಿ ಹಾಗೂ ಕೇರ್ಪಳದಲ್ಲಿ ತೆಂಗಿನ ಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಕಾಮಗಾರಿಗೆ ಚಾಲನೆ ನೀಡಿದರು.

ಜ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ಸದಸ್ಯರಾದ ಶಿಲ್ಪಾ ಸುದೇವ್, ಕಿಶೋರಿ ಶೇಟ್, ಸುಧಾಕರ.ಕೆ, ಪೂಜಿತಾ, ಪ್ರವಿತಾ ಪ್ರಶಾಂತ್, ಪ್ರಮುಖರಾದ ಕುಸುಮಾಧರ ಎ.ಟಿ, ಸುಬೋಧ್ ಶೆಟ್ಟಿ ಮೇನಾಲ,ಸುನಿಲ್ ಕೇರ್ಪಳ, ಎಸ್.ಎಂ. ನಾರಾಯಣ ಶಾಂತಿನಗರ, ಶಂಕರ ಪೆರಾಜೆ, ಶಿವನಾಥ ರಾವ್,ದಯಾನಂದ ಕೇರ್ಪಳ, ಶಿವರಾಮ ಕೇರ್ಪಳ, ಚಂದ್ರಶೇಖರ ಕೇರ್ಪಳ, ಚಂದ್ರಪ್ರಕಾಶ್(ಕೆಕೆಜಿ),

ಶ್ರೀಧರ ಗೌಡ, ಮೋಹನ್, ರವಿಪ್ರಕಾಶ್, ರಮೇಶ್ ಇರಂತಮಜಲು, ಸುರೇಂದ್ರ ಜಯನಗರ, ರಾಧಾಕೃಷ್ಣ ಜಯನಗರ, ವೀಣಾ ನಂಬಿಯಾರ್, ಕುಸುಮಾಧರ ಕೆ.ಜೆ, ಪುಷ್ಪಾ, ಶಕುಂತಲಾದೇವಿ, ಅರವಿಂದ್, ದಾಮೋದರ ಪಡ್ಡಂಬೈಲು, ಸಚಿನ್, ಪಿ.ಕೆ.ಉಮೇಶ್, ಜಿನ್ನಪ್ಪ ಪೂಜಾರಿ, ನವೀನ್ ಕುದ್ಪಾಜೆ, ಚಿದಾನಂದ ಕುದ್ಪಾಜೆ, ಪ್ರಶಾಂತ್ ಕಾಯರ್ತೋಡಿ, ಯಶೋಧರ ಗುಂಡ್ಯ, ಕುಶಲ, ಶ್ವೇತಾ, ಪ್ರಶಾಂತ್, ಬಲ್ರಾಜ, ದಿವಾಕರ, ಗಂಗಾಧರ ಆಳ್ವ,ರತ್ನಾಕರ, ವಾಸುದೇವ, ಭವಾನಿಪ್ರಸಾದ್, ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕ ನವಿತ್ ಮತ್ತಿತರರು ವಿವಿದ ಕಡೆಗಳಲ್ಲಿ ಉಪಸ್ಥಿತರಿದ್ದರು.










