ಸುಳ್ಯ:ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ್ ಅವರು ಸೆ.19ರಂದು ಅಧಿಕಾರ ಸ್ವೀಕರಿಸಿದರು. ಉತ್ತರ ಕನ್ನಡ ಜಿಲ್ಲೆಯ ಕುಂಟ ಪೋಲೀಸ್ ವೃತ್ತ ನಿರೀಕ್ಷಕರಾಗಿದ್ದ ತಿಮ್ಮಪ್ಪ ನಾಯ್ಕ ಅವರನ್ನು ಸುಳ್ಯಕ್ಕೆ ವರ್ಗಾಯಿಸಿ ಸರಕಾರ ಆದೇಶ ಮಾಡಿತ್ತು. ಸುಳ್ಯ ಪ್ರಭಾರ ಸಿಐ ಆಗಿದ್ದ
ಪುತ್ತೂರು ನಗರ ವೃತ್ತ ನಿರೀಕ್ಷಕ ಜಾನ್ಸನ್ ಅವರಿಂದ ತಿಮ್ಮಪ್ಪ ನಾಯ್ಕ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ತಾಲೂಕಿನ ಮಿತ್ತೂರು ಮೂಲದವರಾದ ಅವರು ಈ ಹಿಂದೆ ಆರಕ್ಷಕ ಉಪ ನಿರೀಕ್ಷಕರಾಗಿ
ಮೈಸೂರಿನಲ್ಲಿ ತರಬೇತಿ ಪಡೆದು ಚಿಕ್ಕಮಗಳೂರಿನಲ್ಲಿ ಪ್ರೊಬೇಷನರಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ಬಳಿಕ ಉತ್ತರ ಕನ್ನಡ ಜಿಲ್ಲೆಯ ಭಟ್ಕರ ನಗರ, ಭಟ್ಕಳ ಗ್ರಾಮಾಂತರ, ಹಳಿಯಾಳ, ಕಾರವಾರದ ಕೈಗಾ, ಕಾರವಾರ ಟೌನ್, ಉಪ್ಪಿನಂಗಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2016ರಲ್ಲಿ ವೃತ್ತ ನಿರೀಕ್ಷಕರಾಗಿ ಭಡ್ತಿ ಹೊಂದಿ ಎರಡು ವರ್ಷಗಳ ಕಾಲ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್)ಯಲ್ಲಿ ಸಿಐ ಆಗಿದ್ದರು. ಪುತ್ತೂರು ನಗರ, ಪುತ್ತೂರು ಮಹಿಳಾ ಠಾಣೆ, ಹೊನ್ನಾವರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.