ಸುಳ್ಯ: ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅವರು ಸೆ.25ರಂದು ಅಧಿಕಾರ ಸ್ವೀಕರಿಸಿದ್ದಾರೆ. ವರ್ಗಾವಣೆಯಾಗಿರುವ ನವೀನ್ ಚಂದ್ರ ಜೋಗಿ ಅವರು ಅಧಿಕಾರ ಹಸ್ತಾಂತರಿಸಿದರು. ರೈಲ್ವೇಯಲ್ಲಿ
ಇನ್ಸ್ಪೆಕ್ಟರ್ ಆಗಿದ್ದ ಮಂಗಳೂರಿನವರಾದ ಮೋಹನ್ ಕೊಠಾರಿ ಅವರನ್ನು ಸುಳ್ಯ ವೃತ್ತ ನಿರೀಕ್ಷಕರಾಗಿ ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಕಳೆದ ಮೂರೂವರೆ ವರ್ಷದಿಂದ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರಿಗೆ ರಾಜ್ಯ ಪೊಲೀಸ್ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಆಗಿದೆ.









