ಬೆಂಗಳೂರು: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ.ಈ ವರ್ಷ ಶೇ 83.89 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಪಡೆದಿದ್ದಾರೆ. ಈ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 83.89 ವಿದ್ಯಾರ್ಥಿನಿಯರು ಹಾಗೂ
ಶೇ 80.08 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚಿತ್ರದುರ್ಗ ಪ್ರಥಮ ಸ್ಥಾನ, ಮಂಡ್ಯ 2ನೇ, ಹಾಸನ 3ನೇ ಸ್ಥಾನ ಗಳಿಸಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಚಿತ್ರದುರ್ಗಕ್ಕೆ ಶೇ. 96.80, ಮಂಡ್ಯ ಜಿಲ್ಲೆಗೆ ಶೇ. 96.74ರಷ್ಟು ಫಲಿತಾಂಶ ಬಂದಿದೆ. ಕೊನೆಯ ಸ್ಥಾನ ಗಳಿಸಿರುವ ಯಾದಗಿರಿ ಜಿಲ್ಲೆಯಲ್ಲಿ ಶೇ.75.49ರಷ್ಟು ಫಲಿತಾಂಶ ಬಂದಿದೆ.ಉಡುಪಿ ಜಿಲ್ಲೆ 18ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ 19ನೇ ಸ್ಥಾನದಲ್ಲಿದೆ.
ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಗಳಿಸಿದೆ.
ಇನ್ನು ತಿಳಿಸಿದರು.ಮಾ.31ರಿಂದ ಎ.15ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು.ಫಲಿತಾಂಶವನ್ನು https://karresults.nic.in/ ವೆಬ್ಸೈಟ್ನಲ್ಲಿ ನೋಡಬಹುದು.