ಅಹ್ಮದಾಬಾದ್: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಮೊದಲ ಫ್ಲೇ ಆಫ್ ಪಂದ್ಯದಲ್ಲಿ ಗೆಲುವಿಗೆ ಕೋಲ್ಕತ್ತ ನೈಟ್ರೈಡರ್ಸ್ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ 160 ರನ್ಗಳ ಸಾಧಾರಣ ಗುರಿ ನೀಡಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ
19.3 ಓವರ್ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 159 ರನ್ ಗಳಿಸಿದೆ. ಕೋಲ್ಕತ್ತಾದ ಬಿಗು ಬೌಲಿಂಗ್ ದಾಳಿಗೆ ಕುಸಿದ ಹೈದರಾಬಾದ್ ತಂಡದ ಆಟಗಾರರು ರನ್ ಗಳಿಸಲು ಪರದಾಡಿದರು. ಟ್ರಾವಿಸ್ ಹೆಡ್ ಅವರು ಶೂನ್ಯಕ್ಕೆ ಔಟಾಸರೆ, ರಾಹುಲ್ ತ್ರಿಪಾಟಿ 35 ಬಾಲ್ಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಪ್ಯಾಟ್ ಕಮೀನ್ಸ್ 30, ಕ್ಲಾಸೆನ್ 32 ರನ್ ಗಳಿಸಿದರು.ಕೋಲ್ಕತ್ತದ ಪರ ಮಿಚೆಲ್ ಸ್ಟಾರ್ಕ್ ಅವರು ಮೂರು ವಿಕೆಟ್ ಕಬಳಿಸಿದರೆ, ರಸೆಲ್ ಎರಡು ವಿಕೆಟ್ ಕಿತ್ತರು.
ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್ ಪ್ರವೇಶಿಸಲಿದೆ.