ಸೆಂಚುರಿಯನ್: ಭಾರತ ತಂಡದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಇನಿಂಗ್ಸ್ ಹಾಗೂ 34 ರನ್ಗಳಿಂದ ಗೆಲುವು ದಾಖಲಿಸಿದೆ.ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡ 245 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 408 ರನ್ ಗಳಿಸುವ
ಮೂಲಕ 163 ರನ್ಗಳ ಮುನ್ನಡೆ ಪಡೆದಿತ್ತು. ಡೀನ್ ಎಲ್ಗರ್ 185 ರನ್ ಸಿಡಿಸಿದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 131 ರನ್ಗಳಿಗೆ ಆಲೌಟ್ ಆಗಿದೆ.
ವಿರಾಟ್ ಕೋಹ್ಲಿ 76, ಶುಭಮನ್ ಗಿಲ್ 26 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್ಗಳು ಬೌನ್ಸಿ ಪಿಚ್ನಲ್ಲಿ ಆಫ್ರಿಕಾ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಪರ ನ್ಯಾಂಡ್ರೆ ಬರ್ಗರ್ 33/4, ಮಾರ್ಕೊ ಜಾನ್ಸೆನ್ 36/3 ವಿಕೆಟ್ ಉರುಳಿಸುವ ಮೂಲಕ ಭಾರತದ ಬ್ಯಾಟಿಂಗ್ ಪಡೆಯನ್ನು ಕಾಡಿದರು. ಭಾರತ: 245 ಮತ್ತು 131 ರನ್
ದಕ್ಷಿಣ ಆಫ್ರಿಕಾ: 408 ರನ್









