ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ನೀಡಿದ ಟೀಂ ಇಂಡಿಯಾ ಟಿ20 ವಿಶ್ವಕಪ್ನ ಸೂಪರ್8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಅಂತರದ ಸೋಲನುಭವಿಸಿತು. ಸಂಪೂರ್ಣ ವೈಫಲ್ಯ ಅನುಭವಿಸಿದ ಭಾರತ ತಂಡ ಕನಿಷ್ಠ ಹೋರಾಟವನ್ನೂ ನೀಡದೆ 76 ರನ್ಗಳ ಅಂತರದಲ್ಲಿ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು
20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 18.5 ಓವರ್ಗಳಲ್ಲಿ ಕೇವಲ 111 ರನ್ಗಳಿಗೆ ಆಲ್ ಔಟ್ ಆಯಿತು. ಆರಂಭದಿಂದಲೇ ಪಂದ್ಯ ಕೈಚೆಲ್ಲಿದಂತೆ ಆಡಿದ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಹೋರಾಟದ ಮನೋಭಾವ ತೋರಲಿಲ್ಲ. 42 ರನ್ ಗಳಿಸಿದ ಶಿವಂ ದುಬೆ ಟಾಪ್ ಸ್ಕೋರರಾದರು. ಇಶಾನ್ ಕಿಶನ್ 10, ಅಭಿಷೇಕ್ ಶರ್ಮ 15, ತಿಲಕ್ ವರ್ಮ 1, ಸೂರ್ಯಕುಮಾರ್ ಯಾದವ್ 18, ವಾಶಿಂಗ್ಟನ್ ಸುಂದರ್ 11, ಹಾರ್ದಿಕ್ ಪಾಂಡ್ಯ 18, ರಿಂಕು ಸಿಂಗ್ 0 ಸಂಪೂರ್ಣ ವೈಫಲ್ಯ ಅನುಭವಿಸಿದರು.
ಇದಕ್ಕೂ ಮುನ್ನ ಜಸ್ಪ್ರೀತ್ ಬೂಮ್ರಾ ಅವರ ದಾಳಿಗೆ ಆರಂಭಿಕ ಆಘಾತ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಡಿವಾಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ ಆಸರೆಯಾದರುಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಬೂಮ್ರಾ (15ಕ್ಕೆ3) ಆರಂಭದಲ್ಲಿ ಪೆಟ್ಟು ಕೊಟ್ಟರು. ಇದರಿಂದಾಗಿ 20 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.ಇದರಿಂದಾಗಿ ಪವರ್ಪ್ಲೇ ಅವಧಿಯಲ್ಲಿ ಕೇವಲ 41 ರನ್ಗಳು ಮಾತ್ರ ದಕ್ಷಿಣ ಆಫ್ರಿಕಾ ಖಾತೆ ಸೇರಿದವು. ಈ ಹಂತದಲ್ಲಿ ಜೊತೆಯಾದ ಡಿವಾಲ್ಡ್ ಮತ್ತು ಮಿಲ್ಲರ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿದ ಬ್ರೆವಿಸ್ (45; 29ಎ) ಮತ್ತು ಮಿಲ್ಲರ್ (63; 35ಎ) ಇನಿಂಗ್ಸ್ಗೆ ಬಲ ತುಂಬಿದರು. ಬ್ರೆವಿಸ್ 3 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ಗಳನ್ನು ಹೊಡೆದರು. ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ ಅಜೇಯ 44 ರನ್ಗಳನ್ನು 24 ಎಸೆತಗಳಲ್ಲಿ ಹೊಡೆದರು. ಅದರಲ್ಲಿ 1 ಬೌಂಡರಿ, 3 ಸಿಕ್ಸರ್ ಇದ್ದವು.
ಕೊನೆಯ ಐದು ಓವರ್ಗಳ ಅಂತರದಲ್ಲಿ ಮತ್ತೆ ಮೂರು ವಿಕೆಟ್ಗಳು ಪತನವಾಗಲು ಬೂಮ್ರಾ ಹಾಗೂ ಆರ್ಷದೀಪ್ ಸಿಂಗ್ (28ಕ್ಕೆ2) ಕಾರಣರಾದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು ದ್ವಿಶತಕದ ಗಡಿ ದಾಟಲು ಸಾಧ್ಯವಾಗಲಿಲ್ಲ.






