ಸುಳ್ಯ:ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ‘ಸುಳ್ಯ ದಸರಾ’ಕ್ಕೆ ಸಂಭ್ರಮದ ಚಾಲನೆ. ಇಂದಿನಿಂದ 28ರವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ
ನಡೆಯುವ ದಸರಾ ಉತ್ಸವದ ಭಾಗವಾಗಿ ಶ್ರೀ ಶಾರದಾಂಬಾ ವೇದಿಕೆಯಲ್ಲಿ ಶಾರದಾ ವಿಗ್ರಹದ ಪ್ರತಿಷ್ಠೆ ನಡೆಯಿತು. ಪೂ.10.47ರ ಶುಭ ಮುಹೂರ್ತದಲ್ಲಿ ಪುರೋಹಿತ ನಾಗರಾಜ ಭಟ್ ಹಾಗೂ ಸುದರ್ಶನ ಭಟ್ ಉಜಿರೆ ನೇತೃತ್ವದಲ್ಲಿ ಪ್ರತಿಷ್ಠೆ ನಡೆಯಿತು.ಇದಕ್ಕೂಮುನ್ನ ಜ್ಯೋತಿ ವೃತ್ತದಿಂದ ಶಾರದಾಂಬಾ ವೇದಿಕೆ ತನಕ ಮೆರವಣಿಗೆ ನಡೆಯಿತು.
ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ಕಾಲ ಸುಳ್ಯ ದಸರಾ ಉತ್ಸವ ನಡೆಯಲಿದೆ.
ಹಿರಿಯರಾದ ಕೃಷ್ಣ ಕಾಮತ್ ಅರಂಬೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ,
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್,ಸಾರ್ವಜನಿಕ ಶ್ರಿ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಶ್ರೀ ಶಾರದಾಂಬಾ ಸೇವಾ ದಸರಾ ಸೇವಾ ಟ್ರಸ್ಟ್ನ ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ,
ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ, ಪದಾಧಿಕಾರಿಗಳಾದ ರಾಜು ಪಂಡಿತ್, ಸತೀಶ್ ಎನ್.ಕೆ, ಮಂಜುನಾಥ ಬಳ್ಳಾರಿ, ದೀಪಕ್ ಪಿ.ಎಸ್, ಕುಸುಮಾಧರ ರೈ ಬೂಡು, ಪದ್ಮನಾಭ ಅರ್ಭಡ್ಕ, ಹೇಮನಾಥ ಕೇರ್ಪಳ, ಪ್ರಮುಖರಾದ ಪಿ.ಎಸ್.ಗಂಗಾಧರ, ತೀರ್ಥರಾಮ ಜಾಲ್ಸೂರು, ಶಶಿಧರ ಎಂ.ಜೆ, ಅನೂಪ್, ಭವಾನಿಶಂಕರ ಕಲ್ಮಡ್ಕ, ಚಂದ್ರಶೇಖರ ಪಂಡಿತ್, ಸುರೇಶ್ ಪಂಡಿತ್, ಶಿವ ಬೆಟ್ಟಂಪಾಡಿ, ಗಣೇಶ್ ಬೆಟ್ಟಂಪಾಡಿ ಮತ್ತಿತರರು
ಉಪಸ್ಥಿತರಿದ್ದರು.