ಸುಳ್ಯ: ಶ್ರೀ ಶಾರದ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿ ಮತ್ತು ಪೋಷಕರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಸುಳ್ಯ ತಾಲೂಕು ಕ್ರೀಡಾ ಪರಿವೀಕ್ಷಕರಾದ ಆಶಾ ನಾಯಕ್ ಉದ್ಘಾಟಿಸಿ ಕ್ರೀಡೆಯ
ಮಹತ್ವವನ್ನು ತಿಳಿಸಿದರು. ಸುಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುನಂದಾ ಪೇರಾಲು ಮುಖ್ಯ ಅತಿಥಿಯಾಗಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ನಿರ್ದೇಶಕರಾದ ಡಾ. ಸಾಯಿ ಗೀತಾ ಜ್ಞಾನೇಶ್ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರಭಾವತಿ ಎಸ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಬಾಲಚಂದ್ರ ರವರು ಸಹಕರಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಾರತಿ .ಪಿ ಸ್ವಾಗತಿಸಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ.ಕೆ ವಂದಿಸಿದರು. ಪದವೀಧರ ಶಿಕ್ಷಕರಾದ ಅರ್ಪಣಾ ಕಾರ್ಯಕ್ರಮ ನಿರೂಪಿಸಿದರು.
.