ಕಲ್ಲುಗುಂಡಿ: ಸಂಪಾಜೆಯಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಮಳೆ, ಗಾಳಿಗೆ ವ್ಯಾಪಕ ಹಾನಿಯೂ ಉಂಟಾಗಿದೆ. ಅಲ್ಲಲ್ಲಿ ಮರ ಉರುಳಿ ಬಿದ್ದು ಹಾನಿ ಸಂಭವಿಸಿದೆ. ಮರವೊಂದು ಮುರಿದು ಕಾರಿನ ಮೇಲೆ ಬಿದ್ದು

ಹಾನಿ ಸಂಭವಿಸಿದೆ. ಕಡೆಪಾಲದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಮಳೆಗೆ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ, ವಿದ್ಯುತ್ ಲೈನ್ಗೆ ಹಾನಿ ಉಂಟಾಗಿದೆ. ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಸಂಜೆಯ ವೇಳೆಗೆ ಸಂಪಾಜೆ ಗ್ರಾಮದಲ್ಲಿ ಸಂಜೆಯ ವೇಳೆಗೆ ಭಾರೀ ಮಳೆಯಾಗಿದೆ. ಗಾಳಿಯೂ ಬೀಸಿದ್ದು ವ್ಯಾಪಕ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.