ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಠಾರ, ರಿಕ್ಷಾ ಪಾರ್ಕ್, ಸರಕಾರಿ ಕಟ್ಟಡ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಕೀ. ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕಲ್ಲುಗುಂಡಿ ಪೇಟೆಯಿಂದ
ಗೂನಡ್ಕ ಪೇಟೆ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಸ್ವಚ್ಛತಾ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು . ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪೇರಡ್ಕ ಜುಮ್ಮಾ ಮಸೀದಿ ಖತೀಬ್ ಉಸ್ತಾದ್ ನಹೀಮ್ ಫೈಝಿ, ಕಲ್ಲುಗುಂಡಿ ಜುಮ್ಮಾ ಮಸೀದಿ ಖತೀಬ್ ಉಸ್ತಾದ್. ನಾಸಿರ್ ದಾರಿಮಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಗದೀಶ್ ಕೆ. ಪಿ. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ . ಎಂ. ಶಾಹಿದ್ ತೆಕ್ಕಿಲ್, ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿದರು.
ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ.ಹಮೀದ್ ಗೂನಡ್ಕ ಸ್ವಾಗತಿಸಿ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ. ಹನೀಫ್ ವಂದಿಸಿದರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಾಗರಿಕರು ಜನ ಪ್ರತಿನಿಧಿಗಳು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಅಧಿಕಾರಿಗಳು, ನಿವೃತ ಸೈನಿಕರು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಯುವಕ ಮಂಡಲ, ಸಂಜೀವಿನಿ ಒಕ್ಕೂಟ, ಲಯನ್ಸ್ ಕ್ಲಬ್.ಸಹಕಾರಿ ಸಂಘದ ಸದಸ್ಯರು ಗಳು ವಾಹನ ಚಾಲಕ ಮಾಲಕರು ಭಾಗವಹಿಸಿದ್ದರು.





