ಸಂಪಾಜೆ:ದ.ಕ.ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಡಿ.23ರಂದು ನಡೆಯುವ ಚುನಾವಣೆಗೆ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳು ಡಿ.14ರಂದು ನಾಮಪತ್ರ ಸಲ್ಲಿಸಿದರು. ಸೋಮಶೇಖರ್ ಕೊಯಿಂಗಾಜೆ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಯಿತು. ಅಭ್ಯರ್ಥಿಗಳಾಗಿ
ಸೋಮಶೇಖರ್ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ.ಜಾನಿ, ಕೆ.ಆರ್.ಜಗದೀಶ್ ರೈ, ಯು.ಎಸ್.ಚಿದಾನಂದ, ಸಂಜೀವ ಪೂಜಾರಿ, ಜ್ಞಾನಶೀಲನ್ ನೆಲ್ಲಿಕುಮೇರಿ, ಬಿ.ಎಸ್.ಯಮುನಾ, ಉಷಾ ರಾಮ ನಾಯ್ಕ್, ಪಿ.ಕೆ.ಅಬೂಸಾಲಿ ಗೂನಡ್ಕ, ಸುಶೀಲಾ ನಾಯ್ಕ್, ಪ್ರಮೀಳಾ ಪೆಲ್ತಡ್ಕ, ಸಿಲ್ವಸ್ಟರ್ ಡಿ’ಸೋಜ ನಾಮಪತ್ರ ಸಲ್ಲಿಸಿದರು.