ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ 2 ನೇ ಹಂತದ ಗ್ರಾಮ ಪಂಚಾಯತ್ ಆಡಳಿತ ಅವಧಿಯ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ವಿಚಾರ ಚರ್ಚೆ ನಡೆಯಿತು ಮೀನು ಮಾರುಕಟ್ಟೆ
ವಿಚಾರ, ವಾರ್ಡ್ ಸಭೆ, ಗ್ರಾಮ ಸಭೆ ದಿನಾಂಕ ನಿಗದಿ, ಪಾರ್ಕಿಂಗ್, ಕೂಲಿಶೆಡ್ ಬಸ್ ತಂಗುದಾಣ ರಚನೆ, ಸಾರ್ವಜನಿಕ ರಸ್ತೆಯಲ್ಲಿ ದನಗಳ ಹಾವಳಿ, ಕುಡಿಯುವ ನೀರಿನ ಬಗ್ಗೆ ಮುಂಜಾಗ್ರತೆ ,ತೆರಿಗೆ ವಸೂಲಿ ಹಲವು ವಿಚಾರಗಳ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಸ್. ಕೆ. ಹನೀಫ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಸದಸ್ಯರಾದ ಸೋಮಶೇಖರ ಕೊಯಿಂಗಾಜೆ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಪಿ.ಕೆ.ಅಬುಶಾಲಿ, ಶೌವಾದ್ ಗೂನಡ್ಕ, ವಿಜಯ ಕುಮಾರ್, ವಿಮಲಾ ಪ್ರಸಾದ್, ಅನುಪಮಾ, ಲಿಸ್ಸಿ ಮೊನಾಲಿಸಾ, ಸುಶೀಲ, ರಜನಿ ಶರತ್,ಉಪಸ್ಥಿತರಿದ್ದರು