ಸಂಪಾಜೆ:ಸಂಪಾಜೆ ಗ್ರಾಮದ ದರ್ಕಾಸ್ ಪೇರಡ್ಕ ಬೂತ್ನಲ್ಲಿ ಮನೆ ಮನೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಪೇರಡ್ಕ ಗೂನಡ್ಕ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಮನೆಯಲ್ಲಿ ತೆಕ್ಕಿಲ್ ಖಾಲಿದ್ ಅವರ ಪತ್ನಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ
ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖಂಡರಾದ ಟಿ ಎಂ ಶಾಹಿದ್ ತೆಕ್ಕಿಲ್, ಮೊಹಮ್ಮದ್ ಕುಂಞಿ ಗೂನಡ್ಕ,ವಾರ್ಡ್ ಸದಸ್ಯರಾದ ಅಬೂಶಾಲಿ ಗೂನಡ್ಕ,ಶೌವಾದ್ ಗೂನಡ್ಕ, ಎನ್ ಎಸ್ ಯು ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಬೈಸ್ ಗೂನಡ್ಕ,ಸಫ್ವಾನ್ ಉಪಸ್ಥಿತರಿದ್ದರು. ದರ್ಕಾಸ್ ನಿಂದ ಗೂನಡ್ಕ ತನಕ 30 ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ವಾರ್ಡಿನಲ್ಲಿ ಮತ್ತು ಸಂಪಾಜೆ ಗ್ರಾಮದಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನ ಭಾಗ್ಯ ಮೊದಲಾದ ಯೋಜನೆಗಳನ್ನು ವಿವರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ವಿನಂತಿಸಿದರು. ಕೆಪಿಸಿಸಿ ಬೆಳ್ತಂಗಡಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.