ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಯವರ ಜನ್ಮದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸಂಪಾಜೆ ನೆಲ್ಲಿಕುಮೆರಿ ಬಳಿ ನಡೆಯಿತು. ಪಂಚಾಯತ್ ಮಾಜಿ ಜಿ. ಕೆ. ಹಮೀದ್ ಗೂನಡ್ಕ ಗಾಂಧೀಜಿ ಹಾಗೂ ಶಾಸ್ತ್ರೀ ಜೀವನದ ಆದರ್ಶದ ಬಗ್ಗೆ
ತಿಳಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿ ಈ ದಿವಸದ ಮಹತ್ವ ತಿಳಿಸಿ ಪರಿಸರ ಸ್ವಚ್ಛತೆ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ , ಜಗದೀಶ್ ರೈ, ಯಮುನಾ ಬಿ. ಎಸ್. ಸದಸ್ಯರಾದ ವಿಮಲಾ ಪ್ರಸಾದ್, ಒಕ್ಕೂಟದ ಕಾಂತಿ, ಬಿ. ಎಸ್, ಸರೋಜ, ಗೀತಾ, ಸಬಾಸ್ತಿನ್, ತ್ಯಾಗರಾಜ್, ಹಾಗೂ ಊರವರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು