ಸುಳ್ಯ:ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್ನ ಗೇಟ್ಗಳನ್ನು ಇಂದು ಮತ್ತು ನಾಳೆ ತೆರೆಯಲಾಗುತ್ತಿದ್ದು ನದಿಯಲ್ಲಿ ನೀರಿನ ಹರಿವು ಹೆಚ್ಚಾಗಲಿರುವ ಕಾರಣದಿಂದ ಕೆಳಭಾಗದ ಕೃಷಿಕರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಬಟ್ಟೆ ಒಗೆಯಲು, ಸ್ನಾನಕ್ಕೆ, ಇತರೆ ಕೆಲಸಕ್ಕೆ ನೀರಿಗೆ ಇಳಿಯದಂತೆ
ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ತಿಳಿಸಿರುತ್ತಾರೆ ಎಂದು ನಗರ ಪಂಚಾಯತ್ ಮಾಹಿತಿ ನೀಡಿದೆ.
ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಲ್ಲುಮುಟ್ಲುವಿನ ವೆಂಟೆಡ್ ಡ್ಯಾಮ್ನಲ್ಲಿ ನೀರು ಭರ್ತಿಯಾಗಿದೆ. ಮಳೆಗಾಲದಲ್ಲಿ ಪೂರ್ತಿಯಾಗಿ ತೆರೆಯಲಾಗುವ ವೆಂಟೆಡ್ ಡ್ಯಾಮ್ನ ಷಟರ್ಗಳನ್ನು ಬೇಸಿಗೆಯಲ್ಲಿ ಮುಚ್ಚಿ ನೀರು ಶೇಖರಣೆ ಮಾಡಲಾಗುತ್ತದೆ. ಇದೀಗ ಮಳೆ ಹೆಚ್ಚಾದ ಕಾರಣ ಪಯಸ್ವಿನಿ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದ್ದು

ಡ್ಯಾಮ್ ಭರ್ತಿಯಾಗಿದೆ. ನಾಲ್ಕು ಮೀಟರ್ ಎತ್ತರದಲ್ಲಿ ಡ್ಯಾಮ್ನಲ್ಲಿ ನೀರು ಶೇಖರಣೆ ಮಾಡಲಾಗುತ್ತದೆ. ಡ್ಯಾಮ್ನ 12 ಷಟರ್ಗಳನ್ನು ಹಾಕಲಾಗಿದ್ದು. ಮಳೆಗಾಲದಲ್ಲಿ ಎಲ್ಲಾ ಷಟರ್ಗಳನ್ನು ತೆರೆಯಲಾಗುತ್ತದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು 17 ಕೋಟಿ ಅನುದಾನದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಲಾಗಿತ್ತು.





