ಸುಳ್ಯ:ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಗೂನಡ್ಕ ಸಜ್ಜನಾ ಸಬಾಭವನದಲ್ಲಿ ಜರಗಿತು. 5 ವೇದಿಕೆಗಳಲ್ಲಿ 120 ಸ್ಪರ್ಧೆಗಳಲ್ಲಿ 400ರಷ್ಟು ಸ್ಪರ್ಧಾರ್ಥಿಗಳು 5 ವಿಭಾಗಗಳಾಗಿ ಸ್ಪರ್ಧಿಸಿದರು. ಟೀಂ ಅಜ್ಜಾವರ ಚಾಂಪಿಯನ್ ಮತ್ತು ಟೀಂ ಸುಳ್ಯ ರನ್ನರ್ಸ್ ಪ್ರಶಸ್ತಿ ಪಡೆದರು. ಸುಳ್ಯ ತಾಲೂಕು ಸುನ್ನಿ ಸಂಯುಕ್ತ ಸಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಬೀಜಕೊಚ್ಚಿ ಪ್ರಶಸ್ತಿ ಪ್ರಧಾನ ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು
ಕೊಡುಗೆಗಳನ್ನು ನೀಡಿದ ಡಾ. ಉಮರ್ ಬೀಜದಕಟ್ಟೆ ಅವರಿಗೆ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಜ್ಜಾವರ ಸೆಕ್ಟರ್ನ ನವಾಝ್ ಇರುವಂಬಳ್ಳ ಸ್ಟಾರ್ ಆಫ್ ದ ಫೆಸ್ಟ್ ಮತ್ತು ಜಾಲ್ಸೂರ್ ಸೆಕ್ಟರ್ ನ ಶುಹೈಬ್ ಅಹ್ಮದ್ ಪೆನ್ ಆಫ್ ದ ಫೆಸ್ಟ್ ಪ್ರಶಸ್ತಿ ಪಡೆದರು. ಸಮಾರೋಪ ಸಂಗಮ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸಿದ್ದೀಖ್ ಹಿಮಮಿ ಸಖಾಫಿ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮುಹ್ಸಿನ್ ಸೈದಲವಿ ತಂಙಳ್ ಅಲ್ ಬುಖಾರಿ (ಕುಂಜಿಲಂ ತಂಙಳ್) ಅವರು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಬಾಹ್ ಹಿಮಮಿ ಸಖಾಫಿ ಮುನ್ನುಡಿ ಭಾಷಣಗೈದರು. ಜಯಪ್ರಕಾಶ್ ಅಡ್ಯಡ್ಕ, ಅರಂತೋಡು ಅವರನ್ನು
ಸಾಹಿತ್ಯೋತ್ಸವ ವೇದಿಕಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯೋತ್ಸವ ಪ್ರೋಗ್ರಾಂ ಕಮಿಟಿ ಚೇರ್ಮಾನ್ ರಿಯಾನ್ ಸಅದಿ ಸ್ವಾಗತಿಸಿ ಜನರಲ್ ಕನ್ವೀನರ್ ನಿಯಾಝ್ ಎಲಿಮಲೆ ವಂದಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ. ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಅಬೂಬಕರ್ ಸಖಾಫಿ ಅಲ್ ಅರ್ಷದಿ,ಲತೀಫ್ ಸಖಾಫಿ ಗೂನಡ್ಕ,ಫೈಝಲ್ ಝುಹ್ರಿ ಕಲ್ಲುಗುಂಡಿ,ಹಮೀದ್ ಸುಣ್ಣಮೂಲೆ, ಎಸ್. ಕೆ. ಹನೀಫ್,ಅಡ್ವೆಕಟ್ ಅಬೂಬಕ್ಕರ್,ರಾಶಿದ್ ಅಡ್ಕಾರ್,ಶರೀಫ್ ಸುದ್ದಿ, ಶೌವಾದ್ ಗೂನಡ್ಕ, ಅಬೂಸಾಲಿ ಗೂನಡ್ಕ, ಕೆ.ಎಸ್ ಉಮ್ಮರ್ ಸುಳ್ಯ, ಪೈಝಲ್ ಕಟ್ಟೆಕ್ಕಾರ್,ಗಫ್ಫಾರ್,ಇಬ್ರಾಹಿಂ ಅಲ್ ಮದೀನಾ,ಅಬ್ದುಲ್ ಖಾದರ್ ಪೈಂಬಚ್ಚಾಲ್, ಅಶ್ರಫ್ ಎ.ಟಿ.ಎಸ್,ಅಬ್ಬಾಸ್ ಗೂನಡ್ಕ ,ಇಕ್ಬಾಲ್ ಸುಣ್ಣಮೂಲೆ,ಕೆಪಿ ಜೋನಿ ಕಲ್ಲುಗುಂಡಿ, ಹನೀಫ್ ಸಹದಿ ಗೂನಡ್ಕ, ಸಿದ್ದೀಕ್ ಕಟ್ಟೆಕ್ಕಾರ್,ಅಡ್ವೆಕಟ್ ಮೂಸ ಪೈಂಬಚ್ಚಾಲ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.