ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ಪ್ರಯುಕ್ತ ಸುಳ್ಯ,ಪಂಜ ಹೋಬಳಿ ಘಟಕ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ – ಸಾಹಿತ್ಯ ಸಂಭ್ರಮ ನವೆಂಬರ್ 4ರಿಂದ 12 ರವರೆಗೆ ನಡೆಯಲಿದೆ. ನ.4 ಪೂ. 10ಕ್ಕೆ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ಸಾಹಿತ್ಯ ಸಂಭ್ರಮ ಉದ್ಘಾಟನೆ ಹಾಗೂ
ಕುರುಂಜಿ ಮಹಾಲಿಂಗ ಮಾಸ್ತರ್ ದತ್ತಿನಿಧಿ ಉಪನ್ಯಾಸ ನಡೆಯಲಿದೆ. ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪನ್ಯಾಸ ನೀಡಲಿದ್ದಾರೆ. ನ.5 ರಂದು ಪೂ.ಗಂಟೆ 11.30ಕ್ಕೆ ಸಂಧ್ಯಾರಶ್ಮಿ ಸಭಾಭವನ ಸುಳ್ಯದಲ್ಲಿ ಸುವರ್ಣ ಸಂಭ್ರಮ-50 ಉಪನ್ಯಾಸ ಮತ್ತು ಕನ್ನಡನಾಡ ಗೀತೆ ಸಮೂಹ ಗಾಯನ ನಡೆಯಲಿದ್ದು, ಉಪನ್ಯಾಸವನ್ನು ಜಾನಪದ ವಿದ್ವಾಂಸ ಡಾ.ಸುಂದರ್ ಕೇನಾಜೆ ನೀಡಲಿದ್ದಾರೆ.
ನ.6 ಪೂ.ಗಂಟೆ 11ಕ್ಕೆ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಇಲ್ಲಿ ದಿ. ಗೋವಿಂದೇಗೌಡ ಅತ್ಯುತ್ತಮ ಶಾಲೆ ಪ್ರಶಸ್ತಿ ಪುರಸ್ಕೃತ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಶಿಕ್ಷಕರಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ನ.7 ಅ.ಗಂಟೆ 2ಕ್ಕೆ ಸರಕಾರಿ ಪ್ರೌಢಶಾಲೆ ಎಣ್ಮೂರುನಲ್ಲಿ ಸುವರ್ಣ ಸಂಭ್ರಮ-50 ಉಪನ್ಯಾಸ, ಸ್ಪರ್ಧೆಗಳು, ಬಹುಮಾನ ವಿತರಣೆ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಸ್ತಾಂತರ ನಡೆಯಲಿದ್ದು, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ ಉಪನ್ಯಾಸ ನೀಡಲಿದ್ದಾರೆ.
ನ. 8 ಅ.ಗಂಟೆ 2ಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರೀವೃತ್ತ, ಸುಳ್ಯದಲ್ಲಿ ತಾಲೂಕು ಆಡಳಿತ, ಸುಳ್ಯ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಆಗಮಿಸುವ ಕನ್ನಡ ರಥಕ್ಕೆ ಸ್ವಾಗತ ನಡೆಯಲಿದೆ. ನ.9 ರಂದು ಪೂ. 9.30ಕ್ಕೆ ಸುಳ್ಯ ಕನ್ನಡ ಭವನದಲ್ಲಿ ಸುಳ್ಯ
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ಹಾಗೂ ಸಜ್ಜನ ಪ್ರತಿಷ್ಠಾನ (ರಿ.) ಬೀಜದಕಟ್ಟೆ ಇದರ ಸಹಯೋಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕನ್ನಡ ಶಿಕ್ಷಕರಿಗೆ ಕಾರ್ಯಗಾರ ನಡೆಯಲಿದೆ.
ಪೂ.ಗಂಟೆ 10.30ಕ್ಕೆ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಮರ ಪಡ್ನೂರು ಇಲ್ಲಿ ಸುವರ್ಣ ಸಂಭ್ರಮ ವರ್ಷ- ಉಪನ್ಯಾಸ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಾಹಿತ್ಯಿಕ ಸ್ಪರ್ಧೆಗಳು- ಬಹುಮಾನ ವಿತರಣೆ ನಡೆಯಲಿದೆ.ವಿಶ್ರಾಂತ ಉಪನಿರ್ದೇಶಕರಾದ
ಶೀಲಾವತಿ ಕೊಳಂಬೆ ಉಪನ್ಯಾಸ ನೀಡಲಿದ್ದಾರೆ. ನ.11ರಂದು
ಪೂ.ಗಂ10ಕ್ಕೆ ಗ್ರಾಮ ಪಂಚಾಯತ್ ಗ್ರಂಥಾಲಯ ಗುತ್ತಿಗಾರು ಗ್ರಾ.ಪಂ. ಗುತ್ತಿಗಾರು, ಅರಿವು ಕೇಂದ್ರ ಗ್ರಾ.ಪಂ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸುಳ್ಯ ತಾ| ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಕ್ಲಸ್ಟರ್ ಮಟ್ಟದ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕಿರು ಪ್ರಹಸನ ಸ್ಪರ್ಧೆ ನಡೆಯಲಿದೆ.
ನ.12 ರಂದು ಸಂಜೆ ಗಂಟೆ: 6ಕ್ಕೆ ಶಿವಕೃಪಾ ಸದನ” ಪೆಟ್ರೋಲ್ ಪಂಪ್ ಹಿಂಭಾಗ ಹಳೆಗೇಟು ಇಲ್ಲಿ ಸಾಹಿತ್ಯ ಸಂಭ್ರಮ ಸಮಾರೋಪ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕೆ.ಗೋಕುಲ್ದಾಸ್ (ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ರಾಧಾಕೃಷ್ಣ ಉಳಿಯತ್ತಡ್ಕ (ಸಾಹಿತ್ಯ),ಸುಭಾಸ್ ಪಂಜ( ಭಾಗವತಿಕೆ), ಬಾಲಕೃಷ್ಣ ನೆಟ್ಟಾರು ( ಗಾಯಕ), ಕು. ರಚನಾ ಚಿದ್ಗಲ್ಲು ( ಉದಯೋನ್ಮುಖ ಕಲಾವಿದೆ) ರನ್ನು ಸನ್ಮಾನಿಸಲಾಗುತ್ತದೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸನ್ಮಾನಿಸಲಿದ್ದಾರೆ. ಕನ್ನಡಾಭಿಮಾನಿಗಳು ಭಾಗವಹಿಸಬೇಕೆಂದು ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು ವಿನಂತಿಸಿದ್ದಾರೆ.