ಸುಳ್ಯ:ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಯ ಸುಲಭ ಕಂತು ಯೋಜನೆಯ ಮಾಸಿಕ ಬಂಪರ್ ಡ್ರಾ ನಡೆಸಲಾಯಿತು.
ಸುಲಭ ಕಂತು ಯೋಜನೆಯ ಗ್ರಾಹಕರಿಗೆ ಪ್ರತಿ ತಿಂಗಳು ಬಂಪರ್ ಡ್ರಾ ಮೂಲಕ 1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ
ದ ನಾಲ್ಕನೇ ಡ್ರಾ ಫೆ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆಯಿತು. ಕಾರ್ಡ್ ಸಂಖ್ಯೆ S 2350 ಹೊಂದಿಕೊಂಡಿದ್ದ ನರಸಿಂಹ ಮಡಿವಾಳ ಮಂಡೆಕೋಲು ಅದೃಷ್ಟವಂತರಾಗಿ ಆಯ್ಕೆಯಾಗಿದ್ದು ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತರಾಗಿದ್ದಾರೆ.

ಡ್ರಾ ವಿಜೇತರ ಆಯ್ಕೆಯನ್ನು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷಉನೈಸ್ ಪೆರಾಜೆ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ನ್ಯಾಯವಾದಿ ಶ್ಯಾಮ್ ದಂಪತಿಗಳು, ಉದ್ಯಮಿಗಳಾದ ಸುನಿಲ್, ಸಂಸ್ಥೆಯ ಪಾಲುದಾರರು ಹಾಗೂ ಸಿಬ್ಬಂದಿಗಳು ಗ್ರಾಹಕರು ಉಪಸ್ಥಿತರಿದ್ದರು.




