ಪುತ್ತೂರು:ಪುತ್ತೂರು ಪೆರ್ಲಂಪಾಡಿ ಪಾಂಬಾರು ಬೆಳ್ಳಾರೆ ಬಸ್ಸು ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲುಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಒತ್ತಾಯಿಸಿದ್ದಾರೆ.ಪುತ್ತೂರು ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ, ಹಾಗೂ ಪುತ್ತೂರು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಅವರನ್ನು ಭೇಟಿ ಮಾಡಿ
ಮಾತುಕತೆ ನಡೆಸಿ ಬೆಳಿಗ್ಗೆ 8.15ಕ್ಕೆ ಪುತ್ತೂರು ಬಸ್ಸು ನಿಲ್ದಾಣದಿಂದ ಹೊರಡುವ ಪುತ್ತೂರು ಪೆರ್ಲಂಪಾಡಿ, ಬೆಳ್ಳಾರೆ ಕಲ್ಪಣೆ ಬಸ್ಸು ಹಾಗೂ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಬಸ್ಸು ನಿಲ್ದಾಣದಿಂದ ಬಿಡುವ ಪುತ್ತೂರು ಪೆರ್ಲಂಪಾಡಿ ಪಾಂಬಾರು ಬೆಳ್ಳಾರೆ ಕಲ್ಪಣೆ ಬಸ್ಸು ಸುಮಾರು ಎರಡು ತಿಂಗಳುಗಳಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಇದು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾದ ಬಸ್ಸಾಗಿದ್ದು ಇದರ ಸಂಚಾರವನ್ನು ಪುನರಾರಂಭಿಸುವಂತೆ ಮತ್ತು ಪಾಂಬಾರು ಬಸ್ಸಿಗೆ ಪಾಂಬಾರು ಎಂಬ ನಾಮಫಲಕವನ್ನು ಅಳವಡಿಸುವಂತೆ ಒತ್ತಾಯಿಸಿದರು.









