ಲಖನೌ: ನಾಯಕ ಸಂಜು ಸ್ಯಾಮ್ಸನ್ (71) ಹಾಗೂ ಯುವ ಆಟಗಾರ ಧ್ರುವ ಜುರೇಲ್ (52) ಸಿಡಿಸಿದ ಅಜೇಯ ಅರ್ಧಶತಕಗಳ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ, ಆತಿಥೇಯ ಲಖನೌ ಸೂಪರ್ ಜೈಂಟ್ಸ್ ವಿರುದ್ಧ
7 ವಿಕೆಟ್ ಅಂತರದ ಗೆಲುವು ಸಾಧಿಸಿದೆ.ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಖನೌ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು. ನಾಯಕ ಕೆ.ಎಲ್.ರಾಹುಲ್ (76) ಹಾಗೂ ದೀಪಕ್ ಹೂಡ (50) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.ಈ ಗುರಿ ಬೆನ್ನತ್ತಿದ ಸ್ಯಾಮ್ಸನ್ ಪಡೆ ಇನ್ನೂ 1 ಓವರ್ ಬಾಕಿ ಇರುವಂತೆಯೇ 199 ರನ್ ಗಳಿಸಿ, ಜಯದ ಸವಿಯುಂಡಿತು.ಪ್ರಸ್ತುತ ಟೂರ್ನಿಯಲ್ಲಿ 9 ಪಂದ್ಯವಾಡಿರುವ ರಾಜಸ್ಥಾನಕ್ಕೆ ಇದು 8ನೇ ಗೆಲುವಾಗಿದೆ. ಇಷ್ಟೇ ಪಂದ್ಯವಾಡಿರುವ ಲಖನೌ, ಐದರಲ್ಲಿ ಗೆದ್ದಿದೆ.