ಸುಳ್ಯ:ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿ ವೇದಾಂತ್ ಕೆ.ಎಸ್ 625 ರಲ್ಲಿ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ. ಕೋಲ್ಚಾರಿನ

ವೇದಾಂತ್, ಯಶಸ್ವಿ, ಯಶ್ವಿನಿ
ಮಾಲತಿ ಕೆ ಮತ್ತು ಶ್ರೀ ಶಿವಪ್ರಸಾದ್ ಕೆ ಬಿ ಇವರ ಪುತ್ರ. ರೋಟರಿ ಪ್ರೌಢಶಾಲೆಗೆ ಎಸ್ಎಸ್ಎಲ್ಸಿಯಲ್ಲಿ ಶೇ 98.4 ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 63 ವಿದ್ಯಾರ್ಥಿಗಳ ಪೈಕಿ 62 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
623 ಅಂಕಗಳಿಸಿದ ವೇದಾಂತ್ ಕೆ ಎಸ್ ಶಾಲೆಗೆ ಪ್ರಥಮ ಸ್ಥಾನಿಯಾಗಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದರೆ, ಯಶಸ್ವಿ ಕೆ ಜಿ (619), ಯಶ್ವಿನಿ ಎನ್ (615) ಅಂಕ ಗಳಿಸಿದ್ದಾರೆ.





