ಮುಂಬೈ: 32 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಿ ಹಸಿರು ಪ್ರಪಂಚ ಸೃಷ್ಠಿಸಿರುವ ಗ್ರೀನ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರಿಗೆ ಮುಂಬೈಯ ಜವಾಹರಲಾಲ್ ನೆಹರೂ ಪೋರ್ಟ್ ಅಥಾರಿಟಿ(JNPA) ನೀಡುವ ‘ಗ್ರೀನ್ ಚಾಂಪಿಯನ್’ ಪ್ರಶಸ್ತಿ ಲಭಿಸಿದೆ. ಹೊಸತಾಗಿ 120ಕ್ಕೂ ಹೆಚ್ಚು ಹೊಸ ಕಾಡುಗಳನ್ನು
ಸೃಷ್ಠಿಸುವ ಮೂಲಕ 32 ಲಕ್ಷ ಗಿಡ ಬೆಳೆಸಿದ ನಾಯರ್ ಅವರ ಕಾಯಕವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೇ.26ರಂದು ನವಿ ಮುಂಬೈನಲ್ಲಿ ನಡೆಯುವ ಜೆಎನ್ಪಿಎಯ 36ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವರಾದ ಸರ್ಬಾನಂದ ಸೋನೋವಾಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.





