ಸುಳ್ಯ: ವಿಯೆಟ್ನಾಂನಲ್ಲಿ ನಡೆಯಲಿರುವ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಸುಳ್ಯದ ಬ್ಯಾಡ್ಮಿಂಟನ್ ಪಟು ರಿಝ್ವಾನ್ ಅಹಮ್ಮದ್ ಜನತಾ ಭಾಗವಹಿಸಲಿದ್ದಾರೆ. ವಿಯೆಟ್ನಾಂನಲ್ಲಿ ಡಿ.12ರಿಂದ 17ರ ತನಕ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಏಷಿಯಾ ಸೀನಿಯರ್
ಓಪನ್ 2023ರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಿಝ್ವಾನ್ ಅಹಮ್ಮದ್ ಭಾಗವಹಿಸಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಸೀನಿಯರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಡಬಲ್ಸ್ ವಿಭಾಗದಲ್ಲಿ ರಿಝ್ವಾನ್ ಅಹಮ್ಮದ್ ಅವರು ಬೆಂಗಳೂರಿನ ಬ್ಯಾಡ್ಮಿಂಟನ್ ಆಟಗಾರನ ಜೊತೆ ಆಡಲಿದ್ದಾರೆ.









