ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯುಪಿ ವಾರಿಯರ್ಸ್ ಎದುರು 2 ರನ್ಗಳ ರೋಚಕ ಜಯ ಸಾಧಿಸಿತು. 158 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 155 ರನ್ ಗಳಿಸಿತು. ಬೆಂಗಳೂರು ತಂಡದ
ಸ್ಪಿನ್ನರ್ ಶೋಭನಾ ಆಶಾ ಬಿಗು ಬೌಲಿಂಗ ದಾಳಿಗೆ ಕುಸಿಯಿತು. ಆಶಾ 22 ರನ್ ನೀಡಿ 5 ವಿಕೆಟ್ ಕಿತ್ತರು. ಕೊನೆಯ ಎಸೆತದವರೆಗೂ ಪಂದ್ಯವು ಕುತೂಹಲ ಕೆರಳಿಸಿತ್ತು. ಕೊನೆಯ ಎರಡು ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದೇ ಉತ್ತಮ ಬೌಲಿಂಗ್ ಮಾಡಿದ ಸೋಫಿ ಮಾಲಿನೆಕ್ಸ್ ಮತ್ತು ವೆರ್ಹಾಮ್ಸ್ ಅವರೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಸಬಿನೇನಿ ಮೇಘನಾ (53; 44ಎ, 4X7, 6X1) ಮತ್ತು ರಿಚಾ ಘೋಷ್ (62; 37ಎ, 4X12) ಅವರ ಅರ್ಧಶತಕಗಳಿಂದಾಗಿ ಬೆಂಗಳೂರು ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 157 ರನ್ ಗಳಿಸಿತು.









