ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ ಗುಜರಾತ್ ಟೈಟನ್ಸ್ ಸಾಧಾರಣ ಗುರಿ ನೀಡಿದೆ.ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ 19.3 ಓವರ್ಗಳಲ್ಲಿ 147 ರನ್ ಗಳಿಸಿದ್ದು 148 ಗೆಲುವಿನ ಗುರಿ ನೀಡಿದೆ.ಆರ್ಸಿಬಿ ಬೌಲರ್ಗಳ ಬಿಗು ದಾಳಿ ಮುಂದೆ
ಗುಜರಾತ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಮೊದಲ 6 ಓವರ್ ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 23 ರನ್ಗಳಷ್ಟೇ ಗಳಿಸಿತ್ತು. ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಬ್ಯಾಟಿಂಗ್ ನಡೆಸಿ ಸಾಧಾರಣ ಮೊತ್ತ ಪೇರಿಸಲು ನೆರವಾದರು.
ಸರ್ಫರಾಜ್ ಖಾನ್ 24 ಎಸೆತಗಳಲ್ಲಿ 37 ರನ್, ಡಾಎವಿಡ್ ಮಿಲ್ಲರ್ 20 ಎಸೆತಗಳಲ್ಲಿ 30 ರನ್, ರಾಹುಲ್ ತೆವಾಟಿಯ 21 ಎಸೆತಗಳಲ್ಲಿ 35, ರಶೀದ್ ಖಾನ್ 14 ಎಸೆತಗಳಲ್ಲಿ18 ರನ್ ಬಾರಿಸಿದರು. ಆರ್ಸಿಬಿ ಪರ ಮಹಮ್ಮದ್ ಸಿರಾಜ್,ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿ.ವಿ.ಕುಮಾರ್ ತಲಾ ಎರಡು ವಿಕೆಟ್ ಪಡೆದರು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದ ಫಫ್ ಡುಪ್ಲೆಸಿ ಬಳಗವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಕಳೆದೆರಡು ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಪ್ಲೇ ಆಪ್ ನ
ಕನಸು ನನಸಾಗಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.