ಬೆಂಗಳೂರು: ಐಪಿಎಲ್ ಪಂದ್ಯದಲ್ಲಿ ಟಿಮ್ ಡೇವಿಡ್, ರಜತ್ ಪಾಟಿದಾರ್ ಹಾಗೂ ದೇವದತ್ತ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಬೃಹತ್ ಮೊತ್ತ ಪೇರಿಸಿದೆ. 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಪೇರಿಸಿದ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್ಗಳ ಬೃಹತ್ ಗುರಿ ನೀಡಿದೆ.ಟಾಸ್ ಸೋತು ಮೊದಲು
ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಕೊಹ್ಲಿ 18 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ನೆರವಿನಿಂದ 28, ಸಾಲ್ಟ್ 30 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ಬಳಿಕ ಬಂದ ದೇವದತ್ತ ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ನೆರವಿನಿಂದ51 ರನ್ ಚಚ್ಚಿದರು.
ಟಿಮ್ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ 8 ಸಿಕ್ಸರ್ ನೆರವಿನಿಂದ ಅಜೇಯ,70 ಹಾಗೂ ನಾಯಕ ರಜತ್ ಪಾಟಿದಾರ್ 19ಎಸೆತಗಳಲ್ಲಿ 1 ಬೌಂಡರಿ 6 ಸಿಕ್ಸರ್ ನೆರವಿನಿಂದ ಅಜೇಯ,48 ರನ್ ಕಲೆ ಹಾಕುವ ಕಲೆಹಾಕುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.ಪಾಟಿದಾರ್ ಮತ್ತು ಡೇವಿಡ್ ಸೇರಿ 35 ಎಸೆತಗಳಲ್ಲಿ 99 ರನ್ ಬಾರಿಸಿದರು. ಸಿಕ್ಸರ್ಗಳ ಸುರಿಮಳೆಗೈದ ಆರ್ಸಿಬಿ ಬ್ಯಾಟರ್ಗಳು 19 ಸಿಕ್ಸರ್ ಸಿಡಿಸಿದರು.









