ಸುಳ್ಯ: ಸುಳ್ಯ ತಾಲೂಕಿನ ಪ್ರತಿಷ್ಠಿತ ಸಂಗೀತ ಸಭಾ ಹಾಗೂ ಸಂಗೀತ ಅಧ್ಯಯನ ಕೇಂದ್ರವಾದ ಎಲಿಮಲೆಯ ರಂಜನಿ ಸಂಗೀತ ಸಭಾದ 15ನೇ ವರ್ಷದ ಸಂಗೀತ ಸಂಭ್ರಮ ಕಾರ್ಯಕ್ರಮ ಏಪ್ರಿಲ್ 19 ಭಾನುವಾರದಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಲಿದೆ.ಡಿವೈನ್ ಬ್ಲಾಕ್ ಬಸ್ಟರ್ ಚಲನಚಿತ್ರ ‘ಕಾಂತಾರ’ದ
ಹಿಟ್ ಹಾಡು ‘ವರಾಹರೂಪಂ’ ಹಾಡಿದ ವಿದ್ವಾನ್ ಸಾಯಿ ವಿಘ್ನೇಶ್ ಚೆನ್ನೈ ಅವರ ಹಾಡುಗಾರಿಕೆ ಸಂಗೀತ ಸಂಭ್ರಮದ ಹೈಲೈಟ್ಸ್.ಸಂಜೆ 5-30ರಿಂದ ಚಲನಚಿತ್ರ ಹಿನ್ನಲೆ ಗಾಯಕರು ಹಾಗೂ ಶಾಸ್ತ್ರೀಯ ಸಂಗೀತಗಾರರಾದ ವಿದ್ವಾನ್ ಸಾಯಿ ವಿಘ್ನೇಶ್ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ. ಹಿಮ್ಮೇಳ ವಾದನದಲ್ಲಿ

ವಯಲಿನ್ನಲ್ಲಿ ವಿದ್ವಾನ್ ಕೇಶವ್ ಮೋಹನ್ ಕುಮಾರ್ ಮೈಸೂರು,ಮೃದಂಗದಲ್ಲಿ ವಿದ್ವಾನ್ ಬಿ.ಎಸ್.ಪ್ರಶಾಂತ್ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಶ್ರೀಹರ್ಷ ಉಡುಪ ಬೆಂಗಳೂರು ಸಹಕರಿಸಲಿದ್ದಾರೆ ಎಂದು ರಂಜನಿ ಸಂಗೀತ ಸಭಾದ ನಿರ್ದೇಶಕರಾದ ಸತ್ಯನಾರಾಯಣ ಹೊನ್ನಾಡಿ, ನಿರ್ದೇಶಕರು ಹಾಗೂ ಸಂಗೀತ ಗುರುಗಳಾದ ರೇಖಾ ರೇವತಿ ಹೊನ್ನಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













