ಸುಳ್ಯ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಖಾಸಗೀ ಕಾರ್ಯಕ್ರಮದ ಅಂಗವಾಗಿ ಗುರುವಾರ ಸುಳ್ಯಕ್ಕೆ ಭೇಟಿ ನೀಡಿದರು. ಪೆರಾಜೆ ಸಮೀಪ ಕಲ್ಷರ್ಪೆ ಸಿರಿಕುರಲ್ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಗೋಕುಲ್ದಾಸ್ ನೂತನವಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಮತ್ತು ಮುತ್ತಪ್ಪನ್ ದೈವದ ವೆಳ್ಳಾಟಂ ಕಾರ್ಯಕ್ರಮದಲ್ಲಿ ಅವರು
ಭಾಗವಹಿಸಿದರು. ಗೋಕುಲ್ದಾಸ್ ರಮಾನಾಥ ರೈ ಅವರನ್ನು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್,ಕೆಪಿಸಿಸಿ ಸಂಯೋಜಕ ಎಸ್.ಸಂಶುದ್ದೀನ್,ಸುಳ್ಯ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಎಂ.ವೆಂಕಪ್ಪ ಗೌಡ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್, ನ.ಪಂ.ಸದಸ್ಯ ಶರೀಫ್ ಕಂಠಿ, ಇನ್ಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಮಹಮ್ಮದ್ ಫವಾಝ್ ಕನಕಮಜಲು, ಕೀರ್ತನ್ ಕೊಡಪಾಲ, ರಾಜು ಪಂಡಿತ್, ಜಯಪ್ರಕಾಶ್ ನೆಕ್ರಪ್ಪಾಡಿ, ನವೀನ್ ಚಂದ್ರ ಬೆಂಗಳೂರು, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಶ್ರೀಹರಿ ಕುಕ್ಕುಡೇಲು ಮತ್ತಿತರರು ಉಪಸ್ಥಿತರಿದ್ದರು.