ಕಲ್ಮಡ್ಕ: ಕಲ್ಮಡ್ಕ ಗ್ರಾಮ ಪಂಚಾಯತ್ಗೆ ಮಾಜಿ ಸಚಿವ ರಮಾನಾಥ ರೈ ಡಿ.17ರಂದು ಭೇಟಿ ನೀಡಿದರು.ಕಲ್ಮಡ್ಕ ಗ್ರಾ.ಪಂ.ನ ನವೀಕೃತ ಕಟ್ಟಡ ಡಿ.18 ರಂದು ಉದ್ಘಾಟನೆಗೊಳ್ಳಲಿದ್ದು ಕಟ್ಟಡ ವೀಕ್ಷಿಸಿದ ರಮಾನಾಥ ರೈ ಶುಭ ಹಾರೈಸಿದರು. ಈ ಸಂದರ್ಭದಲ್ಲಿ
ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಸದಸ್ಯೆ ಪವಿತ್ರ ಮಲ್ಲೆಟ್ಟಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ, ಕಾರ್ಯದರ್ಶಿ ಪಿ.ಎಸ್ ಗಂಗಾಧರ, ಮಾಜಿ ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ,ಸಚಿನ್ ರಾಜ್ ಶೆಟ್ಟಿ, ಸಂತೋಷ್ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













