ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಮಂಗಳವಾರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರವು, ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆ, ಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯ, ಸಿನಿಮಾ ಕ್ಷೇತ್ರದಲ್ಲಿ
ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮದಲ್ಲಿ ದಿನೇಶ ಅಮೀನ್ಮಟ್ಟು, ಮಾಯಾ ಶರ್ಮ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದ.ಕ.ಜಿಲ್ಲೆಯ ಮಾರುತಿ ಜನಸೇವಾ ಸಂಘ
ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಪ್ರಶಸ್ತಿ ಪಡೆದವರಿಗೆ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಸರ್ಕಾರ ಘೋಷಿಸಿದೆ.
ಪ್ರಶಸ್ತಿ ವಿಜೇತರ ಪಟ್ಟಿ;
ಸಂಗೀತ
ಡಾ.ನಯನ ಎಸ್. ಮೋರೆ (ಬೆಂಗಳೂರು)
ನೀಲಾ ಎಂ. ಕೊಡ್ಲಿ (ಧಾರವಾಡ)
ಶಬ್ಬೀರ್ ಅಹಮದ್(ಬೆಂಗಳೂರು)
ಡಾ ಎಸ್ ಬಾಳೇಶ ಭಜಂತ್ರಿ ( ಬೆಳಗಾವಿ)
ಚಲನಚಿತ್ರ
ಡಿಂಗ್ರಿ ನಾಗರಾಜ (ಬೆಂಗಳೂರು)
ವಿ ಜನಾರ್ದನ (ಬ್ಯಾಂಕ್ ಜನಾರ್ದನ) (ಬೆಂಗಳೂರು)
ರಂಗಭೂಮಿ
ಎ. ಜಿ. ಚಿದಂಬರ ರಾವ್ ಜಂಬೆ (ಶಿವಮೊಗ್ಗ)
ಪಿ. ಗಂಗಾಧರ ಸ್ವಾಮಿ ( ಮೈಸೂರು)
ಹೆಚ್. ಬಿ. ಸರೋಜಮ್ಮ( ಧಾರವಾಡ)
ತಯ್ಯಬಖಾನ್ ಎಂ ಇನಾಮದಾರ (ಬಾಗಲಕೋಟೆ)
ಡಾ. ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)
ಪಿ. ತಿಪ್ಪೇಸ್ವಾಮಿ ( ಚಿತ್ರದುರ್ಗ)
ಶಿಲ್ಪಕಲೆ/ಚಿತ್ರಕಲೆ/ಕರಕುಶಲ
ಟಿ. ಶಿವಶಂಕರ್ (ದಾವಣಗೆರೆ)
ಕಾಳಪ್ಪ ವಿಶ್ವಕರ್ಮ (ರಾಯಚೂರು)
ಮಾರ್ಥಾ ಜಾಕಿಮೋವಿಚ್ (ಬೆಂಗಳೂರು)
ಪಿ. ಗೌರಯ್ಯ (ಮೈಸೂರು)
ಯಕ್ಷಗಾನ / ಬಯಲಾಟ
ಅರ್ಗೋಡು ಮೋಹನದಾಸ್ ಶೆಣೈ (ಉಡುಪಿ)
ಕೆ. ಲೀಲಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ)
ಕೇಶಪ್ಪ ಶಿಳ್ಳಿಕ್ಯಾತರ (ಕೊಪ್ಪಳ)
ದಳವಾಯಿ ಸಿದ್ದಪ್ಪ (ಹಂದಿಜೋಗಿ) (ವಿಜಯನಗರ)
ಜಾನಪದ
ಹುಸೇನಾಬಿ ಬುಡೆನ್ ಸಾಬ್ ಸಿದ್ದಿ (ಉತ್ತರ ಕನ್ನಡ)
ಶಿವಂಗಿ ಶಣ್ಮರಿ (ದಾವಣಗೆರೆ)
ಮಹದೇವು (ಮೈಸೂರು)
ನರಸಪ್ಪಾ (ಬೀದರ್)
ಶಕುಂತಲಾ ದೇವಲಾನಾಯಕ (ಕಲಬುರಗಿ)
ಎಚ್ ಕೆ ಕಾರಮಂಚಪ್ಪ (ಬಳ್ಳಾರಿ)
ಡಾ ಶಂಭು ಬಳಿಗಾರ (ಗದಗ)
ವಿಭೂತಿ ಗುಂಡಪ್ಪ (ಕೊಪ್ಪಳ)
ಚೌಡಮ್ಮ (ಚಿಕ್ಕಮಗಳೂರು)
ಸಮಾಜಸೇವೆ
ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ)
ಚಾರ್ಮಾಡಿ ಹಸನಬ್ಬ ( ದಕ್ಷಿಣ ಕನ್ನಡ)
ಕೆ.ರೂಪಾ ನಾಯಕ್ (ದಾವಣಗೆರೆ)
ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ನಿಷ್ಕಲಮಂಟಪ (ಬೆಳಗಾವಿ)
ನಾಗರಾಜು ಜಿ ( ಬೆಂಗಳೂರು)
ಆಡಳಿತ
ಜಿ ವಿ ಬಲರಾಮ್ (ತುಮಕೂರು)
ವೈದ್ಯಕೀಯ
ಡಾ ಸಿ ರಾಮಚಂದ್ರ (ಬೆಂಗಳೂರು)
ಡಾ ಪ್ರಶಾಂತ್ ಶೆಟ್ಟಿ (ದಕ್ಷಿಣ ಕನ್ನಡ)
ಸಾಹಿತ್ಯ
ಪ್ರೊ. ಸಿ. ನಾಗಣ್ಣ (ಚಾಮರಾಜನಗರ)
ಸುಬ್ಬು ಹೊಲೆಯಾರ್ (ಎಚ್.ಕೆ.ಸುಬ್ಬಯ್ಯ) (ಹಾಸನ)
ಸತೀಶ ಕುಲಕರ್ಣಿ (ಹಾವೇರಿ)
ಲಕ್ಷ್ಮೀಪತಿ ಕೋಲಾರ (ಕೋಲಾರ)
ಪರಪ್ಪ ಗುರುಪಾದಪ್ಪ ಸಿದ್ದಾಪುರ (ವಿಜಯನಗರ)
ಡಾ. ಕೆ. ಷರೀಫಾ (ಬೆಂಗಳೂರು)
ಶಿಕ್ಷಣ
ರಾಮಪ್ಪ (ರಾಮಣ್ಣ) ಹವಳೆ ( ರಾಯಚೂರು)
ಕೆ. ಚಂದ್ರಶೇಖರ್ (ಕೋಲಾರ)
ಕೆ.ಟಿ ಚಂದ್ರು (ಮಂಡ್ಯ)
ಕ್ರೀಡೆ
ದಿವ್ಯ ಟಿ.ಎಸ್. (ಕೋಲಾರ)
ಅದಿತಿ ಆಶೋಕ್ (ಬೆಂಗಳೂರು)
ಆಶೋಕ್ ಗದಿಗೆಪ್ಪ ಏಣಗಿ (ಧಾರವಾಡ)
ನ್ಯಾಯಾಂಗ
ನ್ಯಾ. ವಿ. ಗೋಪಾಲಗೌಡ (ಚಿಕ್ಕಬಳ್ಳಾಪುರ)
ಕೃಷಿ–ಪರಿಸರ
ಸೋಮನಾಥರೆಡ್ಡಿ ಪೂರ್ಮಾ (ಕಲಬುರಗಿ)
ದ್ಯಾವನಗೌಡ ಟಿ. ಪಾಟೀಲ (ಧಾರವಾಡ)
ಶಿವರೆಸ್ಸಿ ಹನುಮರೆಡ್ಡಿ ವಾಸನ (ಬಾಗಲಕೋಟೆ)
ಸಂಕೀರ್ಣ
ಎ.ಎಂ ಮುದರಿ (ವಿಜಯಪುರ)
ಹಾಜಿ ಅಬ್ದುಲ್ಲಾ ಪರ್ಕಳ (ಉಡುಪಿ)
ಮಿಮಿಕ್ರಿ ದಯಾನಂದ್ (ಮೈಸೂರು)
ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ (ಮೈಸೂರು)
ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ (ಕೊಡಗು)
ಮಾಧ್ಯಮ
ದಿನೇಶ ಅಮೀನ್ಮಟ್ಟು (ದಕ್ಷಿಣ ಕನ್ನಡ)
ಜವರಪ್ಪ (ಮೈಸೂರು)
ಮಾಯಾ ಶರ್ಮ (ಬೆಂಗಳೂರು)
ರಫೀ ಭಂಡಾರಿ (ವಿಜಯಪುರ)
ವಿಜ್ಞಾನ/ ತಂತ್ರಜ್ಞಾನ
ಎಸ್. ಸೋಮನಾಥನ್ ಶ್ರೀಧರ್ ಪನಿಕರ್ (ಬೆಂಗಳೂರು)
ಪ್ರೊ. ಗೋಪಾಲನ್ ಜಗದೀಶ್ (ಚಾಮರಾಜನಗರ)
ಹೊರನಾಡು/ ಹೊರದೇಶ
ಸೀತಾರಾಮ ಅಯ್ಯಂಗಾರ್
ದೀಪಕ್ ಶೆಟ್ಟಿ
ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿಗೌಡ (ರಾಮನಗರ)
ಸಂಘ ಸಂಸ್ಥೆಗಳು
ಕರ್ನಾಟಕ ಸಂಘ (ಶಿವಮೊಗ್ಗ)
ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು)
ಮಿಥಿಕ್ ಸೊಸೈಟಿ (ಬೆಂಗಳೂರು)
ಕರ್ನಾಟಕ ಸಾಹಿತ್ಯ ಸಂಘ (ಯಾದಗಿರಿ)
ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ದಾವಣಗೆರೆ)
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ದಕ್ಷಿಣ ಕನ್ನಡ)
ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ)
ಚಿಣ್ಣರ ಬಿಂಬ (ಮುಂಬೈ)
ಮಾರುತಿ ಜನಸೇವಾ ಸಂಘ (ದಕ್ಷಿಣ ಕನ್ನಡ)
ವಿದ್ಯಾದಾನ ಸಮಿತಿ (ಗದಗ)









