ಸುಳ್ಯ:ಮುಂಗಾರು ಮಳೆ ಬಿರುಸುಗೊಳ್ಳುವ ಸೂಚನೆ ನೀಡಿ ಸುಳ್ಯದಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ತಾಲೂಕಿನ ವಿವಿಧ ಕಡೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿರುವ ಬಗ್ಗೆ
ವರದಿಯಾಗಿದೆ. ಭಾರೀ ಗಾಳಿಯೂ ಬೀಸಿದೆ. ಗಾಳಿಗೆ ವಿವಿಧ ಕಡೆ ಹಾನಿಯೂ ಸಂಭವಿಸಿದೆ. ಪಂಬೆತ್ತಾಡಿ ನೆಕ್ರಕಜೆ ರವಿಪ್ರಸಾದ್ ಅವರ ಮನೆ ಮೇಲೆ ಬಿರುಗಾಳಿಗೆ ಮರ ಬಿದ್ದು ಹಾನಿ ಸಂಭವಿಸಿದೆ.ಭಾರೀ ಗಾಳಿಗೆ
ಅಡಿಕೆ ಮರಗಳೂ ಧರಾಶಾಯಿಯಾಗಿದೆ.ಪಂಜ ಭಾಗದಲ್ಲಿ ಭಾರಿ ಮಳೆ ಹಾಗೂ ಗಾಳಿಗೆ ವ್ಯಾಪಕ ಹಾನಿ ಸಂಭವಿಸಿಸೆ. ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ಗಣೇಶ್ ಜೋಯಿಸ ಎಂಬವರ ತೋಟದಲ್ಲಿ ಸುಮಾರು 300 ಅಡಿಕೆ ಮರ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಕೆಲವೆಡೆ ಸಿಡಿಲು ಬಿದ್ದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಪುತ್ತೂರು ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದೆ. ಮಳೆಗೆ ಪುತ್ತೂರು ನಗರ ಜಲಾವೃತವಾಗಿತ್ತು.ಹಲವೆಡೆ ನೀರು ನುಗ್ಗಿದೆ.