ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೋಟೆ ಮುಂಡುಗಾರು, ಕರಿಕ್ಕಳ , ಎಣ್ಮೂರು, ಕೇನ್ಯ, ಬಾಳಿಲ, ಕೊಲ್ಲಮೊಗರು ಕಟ್ಟ ಗೋವಿಂದನಗರ, ಮುರುಳ್ಯ ಗ್ರಾಮದ ಶೇರ, ಮಡಪ್ಪಾಡಿ,ಬಳ್ಪ, ಪಂಜ, ಗುತ್ತಿಗಾರು, ಕರಿಕಳ, ಎಣ್ಮೂರು, ನಿಂತಿಕಲ್ಲು, ತೊಡಿಕಾನ ಸುತ್ತಮುತ್ತ ಮಳೆಯಾಗಿದೆ. ಕೆಲವೆಡೆ ಗುಡುಗು ಸಿಡಿಲಿನೊಂದಿಗೆ ಉತ್ತಮ ಮಳೆಯಾದರೆ, ಕೆಲವೆಡೆ ಸಾಮಾನ್ಯ ಮಳೆ, ತುಂತುರು ಮಳೆಯಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವು ದಿನಗಳ ಕಾಲ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post