ಸುಳ್ಯ: ಇತ್ತೀಚೆಗೆ ಅಗಲಿದ ಬಿಜೆಪಿ ಧುರೀಣ ನವೀನ್ ಕುಮಾರ್ ರೈ ಮೇನಾಲ ಅವರಿಗೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಬಿಜೆಪಿ ಕಚೇರಿಯಲ್ಲಿ ಮೇ.22 ರಂದು ನಡೆಯಿತು. ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಮಾತನಾಡಿ ಸಂಘಟನೆಯ ಮೇಲೆ ಅಪಾರ ಪ್ರೀತಿ ಗೌರವ ಇಟ್ಟವರು. ಸಂಘಟನೆಗಾಗಿ ನಿರಂತರ ದುಡಿದ ವ್ಯಕ್ತಿ ನವೀನ್ ರೈ ಎಂದು ಹೇಳಿದರು.ಬಿಜೆಪಿ ಮಂಡಲ ಸಮಿತಿ
ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ ನವೀನ್ ರೈ. ಅವರ ಸಾತ್ವಿಕ ಗುಣ, ರಾಜಕೀಯ ಪ್ರಬಿಮುದ್ಧತೆ ಎಲ್ಲರಿಗೂ ಆದರ್ಶ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ‘ಪಕ್ಷದಿಂದ ಕೊಟ್ಟ ಸೂಚನೆಯನ್ನು ಶಿಸ್ತಿನಿಂದ ಮಾಡುತ್ತಿದ್ದ ವ್ಯಕ್ತಿ ಅವರು
ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಇರಿಸಿದವರು. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಎಂದು ಹೇಳಿದರು.
ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋದ ರಾಮಚಂದ್ರ,ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕಣೆಮರಡ್ಕ,ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕಾಯರ್ತೋಡಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ , ಜಿ.ಜಿ.ನಾಯಕ್,ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ,ಎ.ಟಿ.ಕುಸುಮಾಧರ್,ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ,
ರಾಕೇಶ್ ರೈ ಕೆಡೆಂಜಿ ಮಾತನಾಡಿ ನುಡಿನಮನ ಸಲ್ಲಿಸಿದರು.ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆಯಲ್ಲಿ ದ್ದರು.