ಸುಳ್ಯ: ಡಿಸೆಂಬರ್ ತಿಂಗಳ ಮಳೆಗಾಲ ಮುಂದುವರಿದಿದ್ದು ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಿಂದ ನಿರಂತರ ಮಳೆ ಯಾಗಿದೆ. ಸೋಮವಾರ ಬೆಳಗ್ಗಿನಿಂದ ಆರಂಭಗೊಂಡ ಮಳೆ ಸಂಜೆಯ ವೇಳೆ ಬಿರುಸುಗೊಂಡಿತು. ರಾತ್ರಿ ಸ್ವಲ್ಪ ಬಿಡುವು ನೀಡಿದರೂ ಮತ್ತೆ
ಆರಂಭವಾದ ಮಳೆ ನಿರಂತರ ಮುಂದುವರಿದಿದೆ. ಮಂಗಳವಾರ ಬೆಳಿಗ್ಗೆಯೂ ಮಳೆ ಮುಂದುವರಿದಿದೆ. ಕತ್ತಲು ಕವಿದು ಮಳೆಯಾಗುತಿದೆ. ಸುಳ್ಯ ನಗರದಲ್ಲಿ ಕಳೆದ 24 ಗಂಟೆಯಲ್ಲಿ 63 ಮಿ.ಮಿ.ಮಳೆ ಸುರಿದಿದೆ ಎಂದು ಸುಳ್ಯ ನಗರದಲ್ಲಿ ಮಳೆ ದಾಖಲಿಸುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ. ಫೆಂಗಲ್ ಚಂಡ ಮಾರುತದಿಂದ ಅಕಾಲಿಕ ಮಳೆಯಾಗುತ್ತಿದ್ದು ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.