ಸಂಪಾಜೆ: ಸಂಪಾಜೆ, ಕಲ್ಲುಗುಂಡಿ ಭಾಗದಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದೆ.ಗುಡುಗು,ಮಿಂಚು, ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ. ಹಲವು ದಿನಗಳ ಬಳಿಕ ಸಂಪಾಜೆ ಭಾಗದಲ್ಲಿ
ಮಳೆಯಾಗಿದ್ದು ಬಿರು ಬಿಸಿಲು ಮತ್ತು ಉಷ್ಣಾಂಸದಿಂದ ಬಸವಳಿದಿದ್ದ ಇಳೆಗೆ ತಂಪೆರೆದಿದೆ. ಉತ್ತಮ ಮಳೆ ಸುರಿದಿದ್ದು ನೀರು ಹರಿದು ಹೋಗಿದೆ.
ಸುಳ್ಯ ನಗರದಲ್ಲಿ ಗುಡುಗು ಮಿಂಚಿನೊಂದಿಗೆ ಹನಿ ಮಳೆ ಸುರಿದಿದೆ.ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಹನಿಮಳೆ, ತುಂತುರು ಮಳೆಯಾಗಿದೆ. ಸಂಪಾಜೆ, ಗೂನಡ್ಕ, ಅರಂತೋಡು ಪೆರಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಅರಂಬೂರು ತನಕ ಮಳೆಯಾಗಿದೆ. ಸುಳ್ಯ ನಗರದಲ್ಲಿ ಕೆಲವೆಡೆ ಹನಿ ಮಳೆಯಷ್ಟೇ ಸುರಿದಿದೆ.
ಕೊಡಗು ಸಂಪಾಜೆ ಭಾಗದಲ್ಲಿಯೂ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ದೇವರಕೊಲ್ಲಿ, ಕೊಯನಾಡು ಭಾಗದಲ್ಲಿ ಮಳೆಯಾಗಿದೆ.