ಮಡಿಕೇರಿ:ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಸಾಧಾರಣ ಮಳೆಯಾಗಿದೆ.ಕಳೆದ ಕೆಲವು ದಿನಗಳಿಂದ ಕೊಡಗಿನ ವಿವಿಧ ಕಡೆ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.ಕೆಲವೆಡೆ ಮಳೆಯಾಗಿತ್ತು. ಕೊಡಗಿನ ವಿವಿಧ
ಕಡೆ ಇಂದು ಮಳೆ ಸುರಿದಿದೆ..ಮಡಿಕೇರಿ ನಗರದ ಕೆಲವು ಭಾಗ, ನಾಪೊಕ್ಲು, ಬೇತು, ಚೆರಿಯಪರಂಬು, ಕೊಳಕೇರಿ ಎಮ್ಮೆಮಾಡು, ನೆಲಜಿ ಬಲ್ಲಮಾವಟಿ, ಪಾರಾಣೆ, ಕೈಕಾಡು ಹೊದ್ದೂರು, ಮೂರ್ನಾಡು, ಮೇಕೇರಿ, ಬಿಳಿಗೇರಿ ಮೊದಲಾದೆಡೆ ಮಳೆಯಾಗಿದ್ದು, ಜನರಲ್ಲಿ ಸಂತಸ ಮೂಡಿದೆ. ತೀರ್ಥಹಳ್ಳಿ, ವಿಜಯಪುರ ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಮಳೆಯಾಗಿರುವ ಬಗ್ಗೆ ವರದಿಯಾಗಿದೆ.