ಸುಳ್ಯ: ಬೇಸಿಗೆ ಕಾಲದ ಮಳೆ ಮುಂದುವರಿದಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು, ಗಾಳಿಯ ಅಬ್ಬರದೊಂದಿಗೆ ಮಳೆ ಸುರಿದಿದೆ. ಬುಧವಾರ ಸಂಜೆ 4 ಗಂಟೆಯ ವೇಳೆಗೆ ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ

ಗುಡುಗು, ಗಾಳಿ ಸಹೀತ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಗಾಳಿ, ಗುಡುಗಿನ ಅಬ್ಬರದೊಂದಿಗೆ ಸಾಧಾರಣ ಮಳೆಯಾಗಿದೆ. ಕಲ್ಮಡ್ಕ,
ಕುಕ್ಕುಜಡ್ಕ, ಬಳ್ಪ, ಕೇನ್ಯ,ವಬೆಳ್ಳಾರೆ, ಬಾಳಿಲ, ದೊಡ್ಡತೋಟ, ಪಂಜ, ಸಂಪಾಜೆ, ಜಾಲ್ಸೂರು ಸೇರಿ ವಿವಿಧೆಡ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾದರೆ, ಕೆಲವೆಡೆ ಉತ್ತಮ ಮಳೆಯಾಗಿದೆ. ಉಪ್ಪಿನಂಗಡಿ, ಬೆಳ್ತಂಗಡಿ ಭಾಗಗಳಲ್ಲಿಯೂ ಗುಡುಗು, ಗಾಳಿ ಸಹೀತ ಮಳೆಯಾಗಿದೆ. ವಾರದ ಅಂತರದಲ್ಲಿ ಕೆಲವೆಡೆ 2-3 ಬಾರಿ ಮಳೆಯಾಗಿದೆ. ಅಕಾಲಿಕ ಮಳೆ ಅಡಿಕೆ ಒಣಗಿಸುವುದು ಮತ್ತಿತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಭಾರೀ ಬಿಸಿಲು, ಸೆಕೆಯಿಂದ ಬಸವಳಿದಿದ್ದ ಭುವಿಗೆ ನಿರಂತರ ಮಳೆಯಾದಕಾರಣ ಸ್ವಲ್ಪ ತಂಪೆರೆದಿದೆ









