ಸುಳ್ಯ: ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರ ಎರಡನೇ ದಿನವೂ ಭರ್ಜರಿ ಮಳೆಯಾಗಿದೆ. ಗುರುವಾರ ಸಂಜೆ ಎಲ್ಲೆಡೆ ಉತ್ತಮ ಮಳೆಯಾಗಿದೆ. ಸುಳ್ಯ ನಗರದಲ್ಲಿ ಸಂಜೆ 6 ಗಂಟೆಯ ಬಳಿಕ ಸುಮಾರು 45 ನಿಮಿಷ ಮಳೆ ಸುರಿದಿದೆ. ಗಾಳಿ, ಗುಡುಗಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ
ವಾತಾವರಣ ಇದ್ದು ಸಂಜೆಯ ಮಳೆ ಸುರಿದಿದೆ. ಗಾಳಿ ಮಳೆಗೆ ಮರ ಬಿದ್ದು ನಡುಗಲ್ಲು ಹತ್ತಿರ ಸುಳ್ಯ- ಸುಬ್ರಹ್ಮಣ್ಯ ರಸ್ತೆ ಕೆಲವು ಕಾಲ ಸಂಚಾರ ಬಂದ್ ಆಗಿತ್ತು ಬಳಿಕ ಮರ ತೆರವು ಮಾಡಲಾಯಿತು.ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಉತ್ತಮ ಮಳೆಯಾಗಿದೆ. ಬಲ್ನಾಡು ಭಾರೀ ಮಳೆ ಸುರಿದಿದೆ. ದೇಲಂಪಾಡಿ ಮಳೆಯಾಗಿದೆ. ಬಳ್ಪ, ಅಜ್ಜಾವರ ಮುಳ್ಯ ಎಣ್ಮೂರು , ಮುರುಳ್ಯ, ಕಲ್ಮಡ್ಕ ಕಡಬ,ಅಲಂಕಾರು,ಪಂಜ, ಕುಕ್ಕುಜಡ್ಕ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು

ಲಾಯಿಲ,ಗುರುವಾಯನಕೆರೆ,ಗೇರುಕಟ್ಟೆ ಆಸುಪಾಸು ಗಾಳಿಯ ಅರ್ಭಟದೊಂದಿಗೆ ಮಳೆಯಾಗಿದೆ. ಮರಗಳು ಧರೆಗೆ ,ಹೆದ್ದಾರಿಗೆ ಬಿದ್ದು ಸ್ವಲ್ಪ ಸಮಯ ಸಂಚಾರ ವ್ಯತ್ಯಯ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಮೋಚಾ ಚಂಡಮಾರುತ ಪರಿಣಾಮದಿಂದ ರಾಜ್ಯದ ವಿವಿಧೆಡೆ ಭಾಗಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೇರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಎರಡು ದಿನದಿಂದ ಉತ್ತಮ ಮಳೆಯಾಗಿದೆ.
