ಅರಂತೋಡು:ಶಾಲಾ ಶಿಕ್ಷಣ ಇಲಾಖೆ (ಪ ಪೂ )ಮತ್ತು ಎನ್ಎಂಪಿಯು ಕಾಲೇಜು ಅರಂತೋಡು ಇವರ ಸಹಯೋಗದಲ್ಲಿ ನಡೆದ ಹುಡುಗರ ವಿಭಾಗದ ಪದವಿ ಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ
ನೆಹರು ಮೆಮೋರಿಯಲ್ ಪ.ಪೂ ಕಾಲೇಜು ತಂಡ ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಅರಂತೋಡು ಎನ್ಎಂಪಿಯುಸಿ ತಂಡ ದ್ವಿತೀಯ ಸ್ಥಾನಿಯಾಯಿತು. ಸರ್ವಾಂಗೀಣ ಆಟಗಾರನಾಗಿ ಸುಳ್ಯ ಎನ್ಎಂಪಿಯು ಪ್ರಥಮ ಕಲಾ ವಿಭಾಗದ ಪ್ರಮೋದ್ ಎಂ ಯು,ಉತ್ತಮ ಹಿಡಿತಗಾರನಾಗಿ ಪ್ರಥಮ ವಾಣಿಜ್ಯ ವಿಭಾಗದ ಪ್ರೀತಮ್ ಮುಗದೂರ್ ಆಯ್ಕೆಯಾಗಿದ್ದಾರೆ. ಇವರಿಗೆ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು.












