ಅಹಮ್ಮದಾಬಾದ್: ಪ್ರೊ ಕಬಡ್ಡಿ ಲೀಗ್ 2023 ಇಂದಿನಿಂದ (ಡಿಸೆಂಬರ್ 2) ಪ್ರಾರಂಭವಾಗಲಿದೆ. 10ನೇ ಆವೃತ್ತಿಯ ಮೊದಲ ದಿನ ಎರಡು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ಮುಖಾಮುಖಿಯಾಗುತ್ತಿವೆ. ಹಾಗೆಯೇ ಎರಡನೇ ಪಂದ್ಯದಲ್ಲಿ ಯು ಮುಂಬಾ ಮತ್ತು ಯುಪಿ ಯೋಧಾ ನಡುವೆ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್ 2023ರಲ್ಲಿ ಒಟ್ಟು
12 ತಂಡಗಳು ಭಾಗವಹಿಸಲಿದ್ದು 132 ಪಂದ್ಯಗಳು ನಡೆಯಲಿದೆ. ಲೀಗ್ನ 10 ನೇ ಸೀಸನ್ ಇಂದಿನಿಂದ 21 ಫೆಬ್ರವರಿ 2024 ರವರೆಗೆ ನಡೆಯಲಿದೆ. 12 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.ಪ್ರೊ ಕಬಡ್ಡಿ ಲೀಗ್ನ ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾದರೆ, ಎರಡನೇ ಪಂದ್ಯ ರಾತ್ರಿ 9 ಗಂಟೆಗೆ ನಡೆಯಲಿದೆ.ಪ್ರೊ ಕಬಡ್ಡಿ ಲೀಗ್ ಮೊದಲ ದಿನದ ಎರಡೂ ಪಂದ್ಯಗಳನ್ನು ಅಹಮದಾಬಾದ್ನಲ್ಲಿ ನಡೆಯಲಿದೆ.
12 ತಂಡಗಳು:
ಗುಜರಾತ್ ಜೈಂಟ್ಸ್,,ತೆಲುಗು ಟೈಟಾನ್ಸ್,ಯು ಮುಂಬಾ, ಯುಪಿ ಯೋಧಾ,ದಬಾಂಗ್ ದೆಹಲಿ,ತಮಿಳ್ ತಲೈವಾಸ್,
ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಬೆಂಗಾಲ್ ವಾರಿಯರ್ಸ್, ಪಾಟ್ನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್.
ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಎಲ್ಲಾ ಚಾನಲ್ಗಳಲ್ಲಿ ಲಭ್ಯವಿರುತ್ತದೆ.ಪಂದ್ಯಗಳ ಉಚಿತ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್ಸ್ಟಾರ್ ಅಪ್ಲಿಕೇಶನ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.